ನೇರಳೆ ಎಂಬ ಆರೋಗ್ಯಕಾರಿ ಹಣ್ಣಿನ ಶರಬತ್ ಮಾಡಬಹುದು, ಗೊತ್ತಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನೇರಳೆ ಹಣ್ಣಿನ ಶರಬತ್
ಬೇಕಾಗುವ ಪದಾರ್ಥಗಳು: ಒಂದು ಕೆಜಿ ನೇರಳೆ ಹಣ್ಣು, ಅರ್ಧ ಕೆಜಿ ಸಕ್ಕರೆ, ಅರ್ಧ ಲೀಟರ್ ನೀರು, ಏಲಕ್ಕಿ ಪುಡಿ ಒಂದು ಸ್ಪೂನ್.
ಮಾಡುವ ವಿಧಾನ: ನೇರಳೆ ಹಣ್ಣನ್ನು ಶುಭ್ರವಾಗಿ ತೊಳೆದಿಟ್ಟುಕೊಳ್ಳಿ. ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿ ಬೀಜಗಳನ್ನು ಬೇರ್ಪಡಿಸಿ. ನೇರಳೆ ಹಣ್ಣಿನ ರಸಕ್ಕೆ ಸಕ್ಕರೆ ನೀರು ಏಲಕ್ಕಿ ಪುಡಿ ಸೇರಿಸಿ ಒಲೆಮೇಲಿಟ್ಟು ಕುದಿಸಿ. ಚೆನ್ನಾಗಿ ಕುದಿದು ಪಾಕ ಬಂದ ನಂತರ ಒಲೆಯಿಂದ ಕೆಳಗಿಡಿ. ತಣ್ಣಗಾದ ಮೇಲೆ ಗಾಜಿನ ಬಾಟಲಿಯಲ್ಲಿ ತುಂಬಿಡಿ.
ತಣ್ಣಗಿನ ನೀರಿನೊಂದಿಗೆ ಎರಡು ಸ್ಪೂನ್ ಸೇರಿಸಿ ಕುಡಿಯಿರಿ. ಆರೋಗ್ಯಕ್ಕೂ ಉತ್ತಮ. ಬಿಸಿಲ ಬೇಗೆಗೆ ಬಳಲಿದ ದೇಹಕ್ಕೂ ಇದು ಚೈತನ್ಯ ತುಂಬುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!