ಹಣೆಗೆ ಸಿಂಧೂರವಿಟ್ಟಿದ್ದಕ್ಕೆ ಬಾಲಕಿಯರ ಮೇಲೆ ಹಲ್ಲೆ; ಜಮ್ಮು-ಕಾಶ್ಮೀರದಲ್ಲಿ ಶಿಕ್ಷಕ ಸಸ್ಪೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರಿಗೆ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿದ್ದು, ಶಿಕ್ಷಕ ನಿಸಾರ್ ಅಹ್ಮದ್ ನನ್ನು ಜಿಲ್ಲಾಡಳಿತವು ಅಮಾನತು ಮಾಡಿದೆ.
ರಜೌರಿಯ ಖದೂರಿಯನ್ ಪಂಚ್‌ಯಾತ್‌ ಡ್ರಮ್ಮನ್‌ ಎಂಬ ಮಿಡ್ಲ್‌ ಸ್ಕೂಲ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಶಿಕ್ಷಕ ಥಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು. ಹಣೆಗೆ ತಿಲಕವಿಟ್ಟು ತೆರಳಿದ ಕಾರಣಕ್ಕೆ ತಮ್ಮ ಮಗಳಿಗೆ ಶಿಕ್ಷಕ ಥಳಿಸಿದ್ದಾರೆ ಎಂದು ವಿದ್ಯಾರ್ಥಿನಿಯ ಪೋಷಕರು ಗಂಭೀರ ಆರೋಪ ಮಾಡಿದ್ದರು. ಈ ಕುರಿತು ತರಾಜೌರಿ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಮಕ್ಕಳಿಗೆ ನೋವುಂಟು ಮಾಡುವುದು ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 325, 352 ಮತ್ತು 506 ರ ಅಡಿಯಲ್ಲಿ ಮಕ್ಕಳ ಮೇಲಿನ ಹಲ್ಲೆಗಳಿಗೆ ಜೈಲು, ದಂಡ ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸಬಹುದಾಗಿದೆ.
ಯಾವುದೇ ಶಾಲೆಯಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ಮತ್ತು ಥಳಿಸುವ ಘಟನೆ ನಡೆದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!