ಟಿ 20 ವಿಶ್ವಕಪ್‌ ಗೂ ಮುನ್ನ ಟೀಂ ಇಂಡಿಯಾ ನಿರಾಳ: ತಂಡಕ್ಕೆ ಮರಳಿದ ಸ್ಟಾರ್‌ ಪ್ಲೆಯರ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂದಿನ ತಿಂಗಳ 16 ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ ಗೆ ಭಾರತ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಕಳೆದ ಕೆಲ ತಿಂಗಳುಗಳಿಂದ ಟೀಂ ಇಂಡಿಯಾಕ್ಕೆ ಸ್ಟಾರ್‌ ಆಟಗಾರರ ಇಂಜ್ಯೂರಿ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಸರಣಿಯಿಂದ ಸರಣಿಗೆ ಹಲವು ಆಟಗಾರರು ಗಾಯಾಳುಗಳಾಗಿ ಹೊರಗುಳಿಯುತ್ತಿರುವುದು ತಂಡದ ಮ್ಯಾನೇಜ್‌ ಮೆಂಟ್‌ ಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಪ್ರಮುಖ ಆಟಗಾರರ ಗೈರು ಭಾರತ ಏಷ್ಯಾಕಪ್‌  ಟೂರ್ನಿಯಿಂದ ಹೊರಬೀಳಲು ಕಾರಣವಾಗಿತ್ತು. ಇದೀಗ ಟೀಂ ಇಂಡಿಯಾ ನಿರೀಕ್ಷಿಸುತ್ತಿದ್ದ ಶುಭ ಸುದ್ದಿಯೊಂದು ಹೊರಬಿದ್ದಿದೆ.

ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಸಂಪೂರ್ಣ ಫಿಟ್‌ ಆಗಿದ್ದಾರೆ. ಹರ್ಷಲ್ ಪಟೇಲ್‌ ಪಕ್ಕೆಲುಬು ನೋವಿನಿಂದಾಗಿ ಹೊರಗುಳಿದಿದ್ದರು, ಬುಮ್ರಾ ಬೆನ್ನುನೋವಿನಿಂದಾಗಿ ಜುಲೈನಿಂದ ತಂಡದೊಳಕ್ಕೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಇಬ್ಬರು ಟಿ20 ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿತ್ತು. ಇಬ್ಬರೂ ವೇಗಿಗಳು ತಮ್ಮ ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ  ರಾಷ್ಟ್ರೀಯ ತಂಡಕ್ಕೆ ಶೀಘ್ರವೇ ಮರಳಲಿದ್ದಾರೆ. “ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ನಡೆಸುತ್ತಿದ್ದ ಇಬ್ಬರು ತಮ್ಮ ಸಂಪೂರ್ಣ ಫಿಟ್ನೆಸ್ ಅನ್ನು ಮರಳಿ ಪಡೆದಿದ್ದಾರೆ ಮತ್ತು ಸಂಪೂರ್ಣ ಸಾಮರ್ಥ್ಯದಿಂದ ಬೌಲಿಂಗ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟಿ20 ವಿಶ್ವಕಪ್​ಗೂ ಮುನ್ನ ಭಾರತದಲ್ಲೇ ನಡೆಯಲಿರುವ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲಲಿ ಈ ಇಬ್ಬರು ಆಟಗಾರರು ತಂಡಕ್ಕೆ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗಿದೆ.
ಬ್ರೂಮ್ರಾ, ಹರ್ಷಲ್‌ ತಂಡಕ್ಕೆ ಮರಳುವ ಮೂಲಕ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅಭಿಯಾನದಲ್ಲಿ ಟೀಂ ಇಂಡಿಯಾವು ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಅಭಿಯಾನಕ್ಕೆ ಮರಳಲು ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!