Thursday, September 29, 2022

Latest Posts

ಕ್ಲಿನಿಕ್ ಬಾಗಿಲು ತಡವಾಗಿ ತೆರೆದಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ: ವಿಡಿಯೋ ಆಧರಿಸಿ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ಲಿನಿಕ್ ಬಾಗಿಲು ತೆರೆಯಲು ವಿಳಂಬ ಮಾಡಿದ್ದಕ್ಕೆ ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ಇದೇ ತಿಂಗಳ 6ರಂದು ಘಟನೆ ನಡೆದಿದ್ದು, ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪೊಲೀಸರ ಪ್ರಕಾರ ಯುವರಾಜ್ ಗಾಯಕ್ವಾಡ್ ಎಂಬ ವೈದ್ಯ ಕ್ಲಿನಿಕ್ ನಡೆಸುತ್ತಿದ್ದು, ಊಟ ಮಾಡುತ್ತಿದ್ದರಿಂದ ಬಾಗಿಲು ತೆರಯಲು ತಡವಾಗಿದೆ. ಬಾಗಿಲು ತೆರೆದ ಕೂಡಲೇ ರೋಗಿಯ ಸಂಬಂಧಿಕರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಮುಂದಾದ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಘಟನೆಯ ಬಗ್ಗೆ ಡಾ.ಯುವರಾಜ್ ಮತ್ತು ಅವರ ಮಗ ಪೊಲೀಸ್ ದೂರು ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!