Monday, September 26, 2022

Latest Posts

ತಮಿಳು ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ರಾಗಾಗೆ ಆಹ್ವಾನ: ರಾಹುಲ್‌ ಉತ್ತರ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದರು. ಶನಿವಾರ ಈ ಯಾತ್ರೆ ತಮಿಳುನಾಡಿನಲ್ಲಿ ಮುಕ್ತಾಯಗೊಂಡು ಕೇರಳಕ್ಕೆ ಎಂಟ್ರಿ ಕೊಟ್ಟಿದೆ. ತಮ್ಮ ಪಾದಯಾತ್ರೆಯ ಅಂಗವಾಗಿ ರಾಹುಲ್ ತಮಿಳುನಾಡಿನ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಉದ್ಯೋಗ ಖಾತ್ರಿ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಕೆಲ ಕಾಲ ಮಾತನಾಡಿದರು.

ತಮಾಷೆಯ ವಿಷಯಗಳನ್ನು ಹರಟುತ್ತಿದ್ದಾಗ ಮಹಿಳೆಯೊಬ್ಬರು ರಾಹುಲ್‌ಗೆ ಅನಿರೀಕ್ಷಿತ ಪ್ರಶ್ನೆಯೊಂದನ್ನು ಕೇಳಿದರು. ನೀವು ತಮಿಳುನಾಡನ್ನು ಪ್ರೀತಿಸುತ್ತೀರಿ ಎಂದು ನಮಗೆ ತಿಳಿದಿದೆ. ತಮಿಳಿನ ಯುವತಿಯನ್ನು ಕೊಟ್ಟು ನಿಮಗೆ ಮದುವೆ ಮಾಡಲು ನಾವು  ಸಿದ್ಧರಿದ್ದೇವೆ, ನಿಮಗೆ ಒಪ್ಪಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯ ಪ್ರಶ್ನೆಗೆ ರಾಹುಲ್ ಗಾಂಧಿ ನಸುನಕ್ಕು ಅವರೊಂದಿಗೆ ಕೆಲಕಾಲ ಹಾಸ್ಯ ಚಟಾಕಿ ಹಾರಿಸಿದರು. ಈ ಘಟನೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!