ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕದಿನ ವಿಶ್ವಕಪ್‌ನಲ್ಲಿ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದು, ನೋವಿನಲ್ಲಿ ತಿರುಪತಿಯ ಯುವಕನಿಗೆ ಹೃದಯಾಘಾತವಾಗಿದೆ.
ಹೌದು, ಭಾರೀ ನಿರೀಕ್ಷೆಯಿಟ್ಟುಕೊಂಡು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮ್ಯಾಚ್ ನೋಡುತ್ತಿದ್ದ ದುರ್ಗಾ ಸಮುದ್ರದ ಜ್ಯೋತಿ ಕುಮಾರ್ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಸ್ಟೇಡಿಯಂನಲ್ಲಿ ಜ್ಯೋತಿ ಕುಮಾರ್ ಏಕಾಏಕಿ ಭಾರತ ಸೋಲು ಕಂಡು ಪ್ಲೇಯರ‍್ಸ್ ಕಣ್ಣೀರಿಟ್ಟಿದ್ದನ್ನು ಕಂಡು ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಬಿಟೆಕ್ ಮಾಡಿದ್ದ ಜ್ಯೋತಿ ಕುಮಾರ್ ತಿರುಪತಿಯಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದರು. ಸ್ನೇಹಿತರ ಜೊತೆ ಮ್ಯಾಚ್ ನೋಡಲು ತೆರಳಿದ್ದು ಅಲ್ಲಿಯೇ ಹೃದಯಾಘಾತವಾಗಿದೆ.