ಜೆಇಇ-ಮೇನ್ಸ್ 2023: ಸೆಷನ್1 ರಲ್ಲಿ 100ಕ್ಕೆ 100 ಅಂಕ ಪಡೆದ 20 ಅಭ್ಯರ್ಥಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜನವರಿ-ಫೆಬ್ರವರಿಯಲ್ಲಿ ನಡೆದ ಜೆಇಇ ಮುಖ್ಯ ಪರೀಕ್ಷೆಯ ಅವಧಿ 1ರ ಫಲಿತಾಂಶಗಳನ್ನು ಪ್ರಕಟಿಸಿದ್ದು, ಇಪ್ಪತ್ತು ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ಎನ್‌ಟಿಎ ಪ್ರಕಾರ ಪೇಪರ್ 1 ಗಾಗಿ 8.6 ಲಕ್ಷ ಅರ್ಜಿ ಸಲ್ಲಿಸಿದವರಲ್ಲಿ, ಒಟ್ಟು 8.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದು ಶೇಕಡಾ 95.79 ಹಾಜರಾತಿಯಾಗಿದೆ. ಎನ್‌ಟಿಎ ಪರೀಕ್ಷೆಗಳನ್ನುಆರಂಭಿಸಿದಾಗಿನಿಂದಲೂ ಪತ್ರಿಕೆ 1 ಕ್ಕೆ ಇದು ಅತ್ಯಧಿಕ ಹಾಜರಾತಿಯಾಗಿದೆ ಎಂದು ಎನ್‌ಟಿಎ ಹೇಳಿದೆ.

ಜೆಇಇ ಮುಖ್ಯ ಅವಧಿ 2ರ ಪರೀಕ್ಷೆಯು ಏಪ್ರಿಲ್ 6-12,2023 ರಿಂದ ನಡೆಯಲಿದೆ. ನೋಂದಣಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಜೆಇಇ ಮುಖ್ಯ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಅಸ್ಸಾಂ ಹೀಗೆ 13 ಭಾಷೆಗಳಲ್ಲಿ ನಡೆಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!