ನಳಮಹರಾಜನಾದ ರಾಹುಲ್‌ ಗಾಂಧಿ: ವೈರಲ್‌ ಆಗ್ತಿದೆ ಲಾಲೂ ಜೊತೆಗೂಡಿ ಅಡುಗೆ ಮಾಡಿದ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಟನ್ ಅಡುಗೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಗಾ ಅಡುಗೆ ಮನೆಯಲ್ಲಿ ಸೌಟು ತಿರುಗಿಸುತ್ತಿರುವ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಲಾಲು ಜೊತೆಗೆ ರಾಹುಲ್ ಮಟನ್ ಪೀಸ್‌ಗೆ ಮಸಾಲೆ, ಉಪ್ಪು, ಮೆಣಸು ಮತ್ತು ಅರಿಶಿನವನ್ನು ಬೆರೆಸಿದರು.

ಮೊದಲ ಬಾರಿಗೆ ಚಂಪಾರಣ್ ಮಟನ್ ಅಡುಗೆ ಮಾಡಿದ ರಾಹುಲ್, ಲಾಲು ಜೊತೆ ಊಟ ಮಾಡಿ ರಾಜಕೀಯ ಚರ್ಚೆ ನಡೆಸಿದರು. ಲಾಲು ಮತ್ತು ಪುತ್ರಿ ಮೀಸಾ ಭಾರತಿ ಅವರ ಸಲಹೆ ಮೇರೆಗೆ ಮಟನ್ ಕರ್ರಿ ಬೇಯಿಸಿದ್ದೇನೆ ಎಂದು ರಾಹುಲ್ ವಿಡಿಯೋದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!