Thursday, September 29, 2022

Latest Posts

ಹಾಲಿವುಡ್‌ ಚಿತ್ರವಾಗಿ ಮೂಡಿಬರಲಿದೆ ನಟ ಜಾನಿ ಡೆಪ್- ಅಂಬರ್ ಹರ್ಡ್‌ರ ಮಾನನಷ್ಟ ಮೊಕದ್ದಮೆ ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸರಣಿ ಖ್ಯಾತಿಯ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ ದಂಪತಿ ನಡುವಿನ ದಾಂಪತ್ಯ ಕಲಹ ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು.
ʼಜ್ಯಾಕ್ ಸ್ಪ್ಯಾ ರೋʼ ಎಂದೇ ಅಭಿಮಾನಿ ಬಳಗದಲ್ಲಿ ಖ್ಯಾತಿಗಳಿಸಿರುವ ಜಾನಿ ಡೆಪ್, ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸರಣಿಯ ಚಿತ್ರಗಳ ಮೂಲಕ ಜಗದ್ವಿಖ್ಯಾತಿ ಗಳಿಸಿದ ನಟ. ಜಾನಿ ಡೆಪ್ ಮತ್ತು ಪ್ರಖ್ಯಾತ ನಟಿ ಅಂಬರ್ ಹರ್ಡ್ 2015 ರಲ್ಲಿ ವಿವಾಹವಾದರು. ಆದರೆ ಮೇ 2016 ರಲ್ಲಿ ಅವರು ಬೇರ್ಪಟ್ಟರು. ಆ ಬಳಿಕ ನಡೆದ ಘಟನೆಗಳು ಜಾನಿ ಡೆಪ್ ವೃತ್ತಿಜೀವನವನ್ನೇ ಮುಳುಗಿಸಿದವು.

ಜಾನಿ ವಿರುದ್ಧ ಅಂಬರ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಜಾನಿ 2016 ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಜಾನಿ ಡೆಪ್ ಅವರು ತಮ್ಮ ಮಾಜಿ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯ ವಿಚಾರಣೆಗಳು ನಡೆದು ಅಂಬರ್‌ ಜಾನಿ ಮೇಲೆ ಮಾಡಿದ್ದ ಆರೋಪಗಳೆಲ್ಲಾ ಸುಳ್ಳೆಂದು ಸಾಬೀತಾಗಿ, ಜಾನಿಗೆ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿತ್ತು. ಜಾನಿ ಡೆಪ್ ಗೆ 10.35 ಮಿಲಿಯನ್ ಡಾಲರ್ ದಂಡ ಪಾವತಿಸುವಂತೆ ಅಂಬರ್ ಹರ್ಡ್ ಗೆ ನ್ಯಾಯಾಲಯ ಆದೇಶಿಸುವುದರೊಂದಿಗೆ ಪ್ರಕರಣ ಮುಕ್ತಾಯ ಕಂಡಿತ್ತು.
ಈ ಕೇಸ್‌ ಜಗತ್ತಿನಾದ್ಯಂತ ಚಿತ್ರಭಿಮಾನಿಗಳ ಕುತೂಹಲ ಕೆರಳಿಸಿತ್ತು. ಜನರು ಈ ಪ್ರಕರಣದ ವಿಚಾರಣೆಯ ಸುದ್ದಿಗಳನ್ನು ಮುಗಿಬಿದ್ದು ನೋಡುತ್ತಿದ್ದರು. ಈಗ ಈ ಪ್ರಕರಣದ ವಿಚಾರಣೆಯ ವಸ್ತುವನ್ನೇ ಮುಖ್ಯಭೂಮಿಕೆಯಲ್ಲಿಸಿಕೊಂಡು ಹಾಲಿವುಡ್‌ ಚಲನಚಿತ್ರವೊಂದು ಮೂಡಿಬರಲಿದೆ. ‘ಹಾಟ್ ಟೇಕ್: ದಿ ಡೆಪ್ / ಹರ್ಡ್ ಟ್ರಯಲ್’ ಎಂಬ ಶೀರ್ಷಿಕೆಯಡಿ ಚಲನಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಚಿತ್ರದಲ್ಲಿ ಖ್ಯಾತ ನಟ ಮಾರ್ಕ್ ಹಪ್ಕಾ ಅವರ ಜಾನಿ ಡೆಪ್ ಆಗಿ ಮತ್ತು ಮೇಗನ್ ಡೇವಿಸ್ ಅವರು ಹರ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಮೆಲಿಸ್ಸಾ ಮಾರ್ಟಿ ಡೆಪ್‌ನ ವಕೀಲ ಕ್ಯಾಮಿಲ್ಲೆ ವಾಸ್ಕ್ವೆಜ್ ಆಗಿ ಮತ್ತು ಮೇರಿ ಕ್ಯಾರಿಗ್ ಅವರು ಹರ್ಡ್‌ರ ವಕೀಲ ಎಲೈನ್ ಬ್ರೆಡ್‌ಹಾಫ್ಟ್ ಪಾತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ‘ಹಾಟ್ ಟೇಕ್’ ತಾರಾ ದಂಪತಿಗಳ ನ್ಯಾಯಾಲಯದ ಒಳಗೆ ಮತ್ತು ಹೊರಗಿನ ಪ್ರಕ್ಷುಬ್ಧ ಸಂಬಂಧದ ಚಿತ್ರಣವನ್ನು ಕಟ್ಟಿಕೊಡಲಿದೆ. ಈ ಚಿತ್ರದ ಚಿತ್ರದ ಬಗ್ಗೆ ಡೆಪ್ ಮತ್ತು ಹರ್ಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!