ಸೆ. 22 ರಂದು ನಿರುದ್ಯೋಗ ಯುವಜನರ ರಾಜ್ಯ ಮಟ್ಟದ ಸಮಾವೇಶ

ಹೊಸದಿಗಂತ ವರದಿ ಹುಬ್ಬಳ್ಳಿ:

ಅಖಿಲ ಭಾರತ ನಿರುದ್ಯೋಗ ಯುವಜನರ ಹೋರಾಟ ಸಮಿತಿ ವತಿಯಿಂದ ಸೆ. 22 ರಂದು 10.30 ಕ್ಕೆ ಬೆಂಗಳೂರಿನ ಪ್ಯಾಲೇಸ್ ರಸ್ತೆ ಕೊಂಡಜ್ಜಿ ಬಸಪ್ಪ ಸ್ಕೌಟ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಿರುದ್ಯೋಗ ಯುವಜನರ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಾಗಿದೆ ಎಂದು ರಾಜ್ಯ ಸಮಿತಿಯ ಉಪಾಧ್ಯಕ್ಷ ಶರಣ್ಣಪ್ಪ ಉದ್ಭಾಳ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ನಿರುದ್ಯೋಗ ಯುವಕರ‌ ಸಲುವಾಗಿ ರಾಜ್ಯಾದ್ಯಾಂತ ಹೋರಾಟ ಮಾಡಲು ಸಲುವಾಗಿ ಈ ಸಮಾವೇಶ ನಾದಿಯಾಗಲಿದೆ. ಯುವಕರು ಸಹ ಸ್ವಚ್ಛೆಯಿಂದ ಸರ್ಕಾರ ವಿರುದ್ಧ ಹೋರಾಡುತ್ತಿದ್ದಾರೆ. ಸರ್ಕಾರಕ್ಕೆ ನಾಚಿಕೆಗೆಡಿನ ಸಂಗತಿ ಯಾಗಿದೆ ಎಂದರು.

ಸಮಾವೇಶಕ್ಕೆ ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ, ಬರಹಗಾರರ ವಿಜಯ ಹೊನ್ನರಾ, ಸಮಿತಿ ರಾಷ್ಟ್ರಧ್ಯಕ್ಷ ಅಧ್ಯಕ್ಷ ಇ.ವಿ ಪ್ರಕಾಶ, ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ಡಾ. ಶಶಿಕುಮಾರ ಭಾಗವಹಿಸುತ್ತಿದ್ದಾರೆ. ನೂರಾರು ಜನರು ಭಾಗವಹಿಸುತ್ತಿದ್ದಾರೆ. ನಿರುದ್ಯೋಗ ಹೋರಾಟಕ್ಕೆ ಸ್ಪೂರ್ತಿ ನೀಡಲಿದೆ ಎಂದು ಹೇಳಿದರು.

ಸಮಾವೇಶದಲ್ಲಿ 10 ಕ್ಕೂ ಹೆಚ್ಚು ಹಕ್ಕೊತ್ತಾಯ ಮಾಡಲಾಗುತ್ತದೆ. ರಾಜ್ಯದ ೪೪ ಇಲಾಖೆಯಲ್ಲಿ3 ಲಕ್ಷ ಉದ್ಯೋಗ ಖಾಲಿ ಇವೆ. ಅವುಗಳನ್ನು ಪಾರದರ್ಶಕವಾಗಿ ಸಮರೋಪಾದಿಯಲ್ಲಿ ಭರ್ತಿ ಮಾಡಬೇಕು, ನೇಮಕಾತಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಪಿಎಸ್ ಐ ನೇಮಕಾತಿ ಭ್ರಷ್ಟಾಚಾರ ಕುಲಕುಷವಾಗಿ ತನಿಖೆ ನಡೆಸಿ ಶಿಕ್ಷೆ‌ ನೀಡಬೇಕು, ಅತಿಥಿ ಶಿಕ್ಷಕರ, ಭೋಧಕರ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಸಂಘಟನಕಾರಾದ ಭವಾನಿ ಶಂಕರ, ರಣಜಿತ್ ಧೂಪದ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!