Friday, June 2, 2023

Latest Posts

ಪತ್ರಕರ್ತರ ಸಮ್ಮೇಳನ: ವಿವಿಧ ಮಳಿಗೆಗಳ ಪ್ರದರ್ಶನಕ್ಕೆ ವ್ಯವಸ್ಥೆ

ಹೊಸದಿಗಂತ ವರದಿ, ಕಲಬುರಗಿ:

ನಗರದ ಶ್ರೀ ಬಸವರಾಜಪ್ಪಾ ಅಪ್ಪಾ ಸ್ಮರಣಾರ್ಥ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿರುವ 36ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ವಿವಿಧ ಬಗೆಗಳ ಪ್ರದರ್ಶನವನ್ನು ಏರ್ಪಡಿಸಿ, ಬುಕ್ ಸ್ಟಾಲ್ʼಗಳನ್ನು ಹಾಕಲಾಗಿದೆ.
ಛಾಯಾ ಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಕಡೇಚೂರ ಕಲಾಕೃತಿ ಪ್ರದರ್ಶನ, ವ್ಯಂಗ್ಯ ಚಿತ್ರಣ ಪ್ರದರ್ಶನ, ಬ್ಯಾಂಕ್ ಸಾಲಗಳ ಸ್ಟಾಲ್ʼಗಳ ಮಳಿಗೆಗಳು ಹಾಕಲಾಗಿದೆ.
ಕೋವಿಡ್ ದೃಷ್ಟಿಯಿಂದ ಯುನೈಟೆಡ್ ಆಸ್ಪತ್ರೆ ವತಿಯಿಂದ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿರತಣೆ ಸ್ಟಾಲ್, ಸಪ್ನಾ ಬುಕ್ ಸ್ಟಾಲ್,‌ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ, ರಕ್ತ ತಪಾಸಣೆ, ಬಿಪಿ, ಶುಗರ್ ಮತ್ತು ಯಾರಾದರೂ ಲಸಿಕೆ ಪಡೆಯದಿದ್ದವರಿಗೆ ಲಸಿಕೆ ಹಾಕುವ ವ್ಯವಸ್ಥೆ ಕೂಡ ಮಾಡಲಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!