ಅಫ್ಘಾನ್‌ನಲ್ಲಿ ಕೆಲಸ ಕಳೆದುಕೊಳ್ಳುತ್ತಿರುವ ಪತ್ರಕರ್ತರು : 300ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆ ಕ್ಲೋಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಾಗಿನಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಫ್ಘಾನ್‌ನ 34 ಪ್ರಾಂತ್ಯಗಳ ಪೈಕಿ 33 ರಲ್ಲಿ ಸುಮಾರು 318 ಮಾಧ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ.
51 ಟಿವಿ ಸ್ಟೇಷನ್, 132 ರೇಡಿಯೋ ಹಾಗೂ 49 ಆನ್‌ಲೈನ್ ಮೀಡಿಯಾ ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಈ ಬಗ್ಗೆ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ವರದಿ ಮಾಡಿದ್ದು, ಸುದ್ದಿ ಸಂಸ್ಥೆಗಳ ಸ್ಥಿತಿ ಬಗ್ಗೆ ಹೇಳಲಾಗಿದೆ.

ಚಾನೆಲ್‌ಗಳ ಜತೆ ಸುದ್ದಿ ಪತ್ರಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅಫ್ಘಾನ್‌ನಲ್ಲಿ ಒಟ್ಟಾರೆ 114 ಪತ್ರಿಕೆಗಳ ಇದ್ದು, ಇದರಲ್ಲಿ ಕೇವಲ 20 ಪತ್ರಿಕೆಗಳು ಮಾತ್ರ ಮುದ್ರಣ ನಡೆಸುತ್ತಿವೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಐದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲಿ ಶೇ.72ರಷ್ಟು ಮಹಿಳಾ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಒಟ್ಟಾರೆ ಆಫ್ಘನ್‌ನಲ್ಲಿ ಇದೀಗ ಕೆಲಸ ಮಾಡುತ್ತಿರುವ ಮಹಿಳಾ ಪತ್ರಕರ್ತರ ಸಂಖ್ಯೆ 243 ಆಗಿದೆ. ಕೆಲಸ ಕಳೆದುಕೊಂಡಿರುವ ಪತ್ರಕರ್ತರಿಗೆ, ದೇಶ ಬಿಟ್ಟು ಹೋಗುವಂತೆ ಒತ್ತಾಯಿಸಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!