Wednesday, February 8, 2023

Latest Posts

ನ್ಯಾಯಾಂಗ ಡಿಜಿಟಲೀಕರಣ: ಎಲೆಕ್ಟ್ರಾನಿಕ್‌ ವರದಿಗಳ ಯೋಜನೆ ಪ್ರಾರಂಭಿಸಲಿದೆ ಸುಪ್ರಿಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಡಿಜಿಟಲೀಕರಣ ಗೊಳಿಸುವ ಪ್ರಯತ್ನಕ್ಕೆ ಸುಪ್ರಿಂ ಕೋರ್ಟ್‌ ಕೈ ಹಾಕಿದ್ದು, ಇದರ ಭಾಗವಾಗಿ ಎಲೆಕ್ಟ್ರಾನಿಕ್‌ ಸುಪ್ರಿಂ ಕೋರ್ಟ್‌ ವರದಿ ಯೋಜನೆ (e-SCR) ಪ್ರಾರಂಭಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇ-ಎಸ್‌ಸಿಆರ್‌ ಪೋರ್ಟಲ್‌ ಅನ್ನು ಪ್ರಾರಂಭಿಸಲಾಗುವುದು ಎಂದು ಭಾರತದ ಮುಖ್ಯನ್ಯಾಮೂರ್ತಿಗಳಾದ ನ್ಯಾ.ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.

ಈ ವ್ಯವಸ್ಥೆಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳು, ಟಿಪ್ಪಣಿಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಸಂಗ್ರಹಿಸಿ, ಅವು ಎಲೆಕ್ಟ್ರಾನಿಕ್‌ ರೂಪದಲ್ಲಿ ಸಿಗುವಂತೆ ಮಾಡಲಾಗುತ್ತದೆ. ಇದರಿಂದಾಗಿ ಸುಪ್ರಿಂ ಕೋರ್ಟಿನ ಸುಮಾರು 34 ಸಾವಿರಕ್ಕೂ ಅಧಿಕ ತೀರ್ಪುಗಳು ಎಲೆಕ್ಟ್ರಾನಿಕ್‌ ರೂಪದಲ್ಲಿ ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್, ಅದರ ಮೊಬೈಲ್ ಅಪ್ಲಿಕೇಶನ್ ಮತ್ತು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (NJDG)ಗಳಲ್ಲಿ ಈ ತೀರ್ಪುಗಳು ಲಭ್ಯವಿರಲಿವೆ.

ಇ-ಎಸ್‌ಸಿಆರ್ ಯೋಜನೆಯು ‘ಸುಪ್ರೀಂ ಕೋರ್ಟ್ ವರದಿ(ಎಸ್‌ಸಿಆರ್‌)ಗಳ ಸಾಫ್ಟ್ ಕಾಪಿಗಳನ್ನು ಪ್ರಸ್ತುತಪಡಿಸಲಿದ್ದು ಅದು ಪಿಡಿಎಫ್ ಸ್ವರೂಪದಲ್ಲಿ ಲಭ್ಯವಿರುತ್ತದೆ. 1950 ರಲ್ಲಿ ಪ್ರಾರಂಭವಾದಾಗಿನಿಂದ ಸುಪ್ರೀಂ ಕೋರ್ಟ್‌ನ ಸಂಪೂರ್ಣ ತೀರ್ಪುಗಳು ಈಗ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ.

ಹುಡುಕಾಟವನ್ನು ಸುಲಭವಾಗಿಸಲು ಪ್ರಕರಣದ ಪ್ರಕಾರ ಹುಡುಕಾಟ, ಉಚಿತ ಪಠ್ಯ ಹುಡುಕಾಟ ಇತ್ಯಾದಿ ಆಯ್ಕೆಗಳನ್ನು ನೀಡಲು ಮೆಟಾ ಡಾಟಾ ರಚಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ದೊಂದಿಗೆ ಸುಪ್ರಿಂ ಕೋರ್ಟ್‌ ಕೆಲಸ ಮಾಡಿದೆ. ಇದು ನ್ಯಾಯಾಂಗದ ಹುಡುಕಾಟವನ್ನು ಸುಲಭಗೊಳಿಸಲಿದೆ. ಸುಪ್ರಿಂ ಕೋರ್ಟ್‌ ನ್ಯಾಯಾಂಗ ಮಾಹಿತಿ ಕಲೆಹಾಕುವುದು ದುಬಾರಿಯ ಕೆಲಸ ಎಂಬ ಆರೋಪಗಳು ಹಿಂದಿನಿಂದಲೂ ಇವೆ, . ನ್ಯಾಯಾಂಗದ ಘೋಷಣೆಗಳು ಸುಲಭವಾಗಿ ಲಭ್ಯವಾಗುವುದಿಲ್ಲ ಮತ್ತು ಅವುಗಳು ದೀರ್ಘವಾಗಿರುತ್ತವೆ ಮತ್ತು ಓದಲಾಗುವುದಿಲ್ಲ ಹೀಗಾಗಿ ಅವು ಕೆಲ ವರ್ಗದವರಿಗೆ ಮಾತ್ರ ಸೀಮಿತ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವ್ಯವಸ್ಥೆಯಿಂದ ಚಿತ್ರಣ ಬದಲಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!