4 ವರ್ಷದ ನಂತರ ತೆರೆದ ಝರಣಿ ಗುಹಾ ದೇವಾಲಯ: ನೀರಿನಲ್ಲಿ 200 ಮೀಟರ್ ಸಾಗಿ ಬಂದು ದರ್ಶನ ಪಡೆದ ಭಕ್ತರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೀದರ್‌ನ ಐತಿಹಾಸಿಕ ಝರಣಿ ಗುಹಾ ದೇವಾಲಯದ ಉಗ್ರನರಸಿಂಹ ಸ್ವಾಮಿ ದರ್ಶನಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ. ನಾಲ್ಕು ವರ್ಷದ ನಂತರ ದೇವಾಲಯಕ್ಕೆ ಭಕ್ತರು ಆಗಮಿಸಿದ್ದು, ನರಸಿಂಹಸ್ವಾಮಿ ದರ್ಶನ ಪಡೆದಿದ್ದಾರೆ. ಎದೆ ಎತ್ತರದ ನೀರಿನಲ್ಲಿ 200ಮೀಟರ್ ಸಾಗಿ ನಂತರ ದೇವರ ದರ್ಶನ ಪಡೆಯಲು ಅವಕಾಶ ಸಿಗಲಿದೆ.

ದೇವಾಲಯ ಗುಹೆಯ ಒಳಗೆ ಇರುವ ಕಾರಣ, ಆಕ್ಸಿಜನ್ ಸಮಸ್ಯೆ ಎದುರಾಗಿದ್ದು, ನಾಲ್ಕು ವರ್ಷಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಇದೀಗ ಬೆಳಗ್ಗೆ 7 ರಿಂದ 10 ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಳೆ ಕೊರತೆ ಇಂದ ಗುಹೆ ಒಳಗೆ ನೀರು ಕಡಿಮೆಯಾಗಿತ್ತು. ಆಕ್ಸಿಜನ್ ಪೈಪ್ ಹಾಳಾಗಿತ್ತು. ಇದನ್ನು ರಿಪೇರಿ ಮಾಡಿಸುವಷ್ಟರಲ್ಲಿ ಕೊರೋನಾ ಹಾವಳಿ ಎದುರಾಗಿತ್ತು. ಹೀಗಾಗಿ ಬರೋಬ್ಬರಿ ನಾಲ್ಕು ವರ್ಷದ ನಂತರ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!