ನರ್ಸ್ ವೇಷದಲ್ಲಿ ಬಂದು ಪುಟ್ಟ ಕಂದಮ್ಮನನ್ನು ಅಪಹರಿಸಿದ ವಂಚಕಿ!

ಹೊಸದಿಗಂತ ವರದಿ,ಹಾವೇರಿ:

ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕಿಯ ವೇಶದಲ್ಲಿದ್ದ ಮಹಿಳೆಯೊಬ್ಬಳು ಒಂದು ದಿನದ ಹೆಣ್ಣು ಮಗುವನ್ನು ಆ ಮಗುವಿನ ಅಜ್ಜಿಯನ್ನು ಯಾಮಾರಿಸಿ ಅಪಹರಿಸಿರುವ ಘಟನೆ ಶನಿವಾರ ಜರುಗಿದೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎನ್ನುವವರಿಗೆ ಶುಕ್ರವಾರ ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಶನಿವಾರ ನರ್ಸ್ ವೇಶದಲ್ಲಿದ್ದ ಮಹಿಳೆಯೊಬ್ಬಳು ಮಗುವಿನ ಅಜ್ಜಿಯನ್ನು ಯಾಮಾರಿಸಿ ಮಗುವನ್ನು ಅಪಹರಣ ಮಾಡಿದ್ದಾಳೆ.
ಘಟನೆ ಹಿನ್ನಲೆ
ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ರಂಜಿತಾ ಕುಂಬಾರ ಅವರು ಹೆಣ್ನು ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುವಿನ ಆರೋಗ್ಯದಲ್ಲಿ ಸ್ಪಲ್ಪ ವ್ಯತ್ಯಾಸವಾದ ಕಾರಣಕ್ಕೆ ಮಗುವಿನ ಅಜ್ಜಿ ವೈದ್ಯರಿಗೆ ತೋರಿಸುವುದಕ್ಕೆ ಶಿಶುವನ್ನು ಕರೆ ತಂದಿದ್ದಾರೆ. ಇದೇ ಸಮಯಕ್ಕೆ ನರ್ಸ್ ದಿರಿಸಿನಲ್ಲಿದ ಮಹಿಳೆಯೊಬ್ಬಳು ಈ ಅಜ್ಜಿಯನ್ನು ವಿಚಾರಿಸಿದ್ದಾರೆ ಆಗ ಆಜ್ಜಿ ಮಗುವನ್ನು ವೈದ್ಯರಿಗೆ ತೋರಿಸಲು ಬಂದಿರುವದಾಗಿ ತಿಳಿಸಿದ್ದಾರೆ.
ಆಗ ಆಮಹಿಳೆ ಆಖಸಗಿ ಆಸ್ಪತ್ರೆಯನ್ನು ಚಿಕಿತ್ಸೆ ಕೊಡಿಸುವದಾಗಿ ಅಜ್ಜಿಯನ್ನು ನಂಬಿಸಿ ನಗರದ ಖಾಸಗಿ ಆಸ್ಪತ್ರೆಗೆ ಶನಿವಾರ ಕರೆ ತಂದಿದ್ದಾರೆ. ಆ ಆಸ್ಪತ್ರೆಯಲ್ಲಿ ಓಡಾಡಿ ನಂತರ ಜಿಲ್ಲಾ ಆಸ್ಪತ್ರೆಗೆ ಕರೆ ತರುವ ಸಂದರ್ಭದಲ್ಲಿ ದಾರಿ ಮದ್ಯದಲ್ಲಿ ನಾನು ಮಗುವನ್ನು ನೋಡಿಕೊಳ್ಳುತ್ತೇನೆ ನೀನು ಹಣ್ಣು ತಗೆದುಕೊಂಣಡು ಬಾ ಎಂದು ಹೇಳಿ ಅಜ್ಜಿಗೆ ಹಣವನ್ನು ನೀಡಿ ಕಳಿಸಿದ್ದಾಳೆ. ಅಜ್ಜಿ ಹಣ್ಣು ತರುವುದಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿಂದ ಮಗುವಿನೊಂದಿಗೆ ಜಾಗ ಖಾಲಿ ಮಾಡಿದ್ದಾಳೆ.
ಜಿಲ್ಲಾ ಆಸ್ಪತ್ರೆಯ ಸಿಸಿಟಿಯಲ್ಲಿ ಕಳ್ಳತನ ಮಾಡಿರುವ ಮಹಿಳೆ ಮತ್ತು ಮಗುವನ್ನು ಎತ್ತಿಕೊಂಡಿರುವ ಅಜ್ಜಿಯೊಂದಿಗೆ ಸಂಭಾಷಣೆ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದಲ್ಲದೆ ಆಸ್ಪತ್ರೆ ಆವರಣದಲ್ಲಿ ನರ್ಸ್ ವೇಶದಲ್ಲಿ ತಿರುಗಾಡುತ್ತಿರುವ ಆ ಮಹಿಳೆಯ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಆ ಮಹಿಳೆ ಮುಖಕ್ಕೆ ಮಾಸ್ಕ್ ಧರಿಸಿದ್ದರೂ ಮಹಿಳೆಯ ಮುಖ ಚರ್ಯೆ ತಕ್ಕ ಮಟ್ಟಿಗೆ ಸ್ಪಷ್ಟವಾಗಿ ಕಂಡುಬರುತ್ತಿದೆ.
ನವಜಾತ ಶಿಶುವನ್ನು ಕಳೆದುಕೋಮಡಿರುವ ಕುಟುಂಬಸ್ತರು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮಗು ಎಲ್ಲಿ ನಮ್ಮ ಮಗು ಎಲ್ಲಿ ಎಂದು ಮಗುವಿನ ಪೋಷಕರು ಗೋಗರೆಯುತ್ತಿದ್ದಾರೆ. ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಗುವನ್ನು ಅಪಹರಿಸಿರು ಮಹಿಳೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!