ಇದು ಜಾತ್ರೆ, ಸಂತೆ ಅಲ್ಲ ರೈಲ್ವೆ ನಿಲ್ದಾಣ! ಕಾಲ್ತುಳಿತಕ್ಕೆ ಪ್ರಯಾಣಿಕ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಬ್ಬಕ್ಕೆ ಒಂದು ದಿನ ಮುಂಚೆ, ಹಬ್ಬ ಆದ ಒಂದು ದಿನದ ನಂತರ ರೈಲಿನಲ್ಲಿ ಪ್ರಯಾಣ ಮಾಡೋದಕ್ಕಿಂತ ಕೆಟ್ಟ ಅನುಭವ ಬೇರೊಂದಿಲ್ಲ, ಹೌದು, ಸಂತೆಯೋ, ಜಾತ್ರೆಯೋ ಅನ್ನುವಷ್ಟು ಜನ ರೈಲಿನಲ್ಲಿ ತುಂಬಿರುತ್ತಾರೆ.

ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್‌ನಲ್ಲಿ ರೈಲ್ವೆ ನಿಲ್ದಾಣದಲ್ಲಿ ಆಗಿರುವ ರಶ್‌ನಿಂದ ಕಾಲ್ತುಳಿತಕ್ಕೆ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ.

ಜನ ಬಿಹಾರದ ರಕ್ಷೌಲ್‌ಗೆ ಹೋಗುವ ರೈಲಿನಲ್ಲಿ ತೆರಳಲು ಕಾದು ನಿಂತಿದ್ದು, ಉಸಿರಾಡುವಷ್ಟೂ ಜಾಗ ಇಲ್ಲದಷ್ಟು ಹತ್ತಿರಕ್ಕೆ ಜನ ನಿಂತಿದ್ದಾರೆ. ರಶ್‌ನಲ್ಲಿ ಒಬ್ಬರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!