ತಾಯಿಗಾಗಿ ಮಿಡಿದ ಮಗನ ಹೃದಯ: ಮನೆಗೆಲಸಕ್ಕೆ ನೆರವಾಗಲು ರೋಬೋಟ್ ವಿನ್ಯಾಸಗೊಳಿಸಿದ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತನ್ನ ತಾಯಿ ಮನೆಕೆಲಸ ಮಾಡಲು ತುಂಬಾ ಕಷ್ಟಪಡುವುದನ್ನು ನೋಡಿದ ಮಗ ಅವಳಿಗಾಗಿ ‘ಪತ್ತುಟಿ’ ಎಂಬ ರೋಬೋಟ್ ಅನ್ನು ತಯಾರಿಸಿದ್ದಾನೆ. ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬ ಪ್ರದೇಶದ 17 ವರ್ಷದ ವಿದ್ಯಾರ್ಥಿ ಮೊಹಮ್ಮದ್ ಶಿಯಾದ್ ದ್ವಿತೀಯ ಪಿಯುಸಿ ಓದುತ್ತಿದ್ದಾನೆ.

ಶಿಯಾದ್ ತನ್ನ ಶಾಲೆಯ ಯೋಜನೆಯ ಭಾಗವಾಗಿ ರೋಬೋಟ್ ಅನ್ನು ತಯಾರಿಸಿದ್ದಾನೆ. ಜೊತೆಗೆ ಈ ರೋಬೋಟ್ ತನ್ನ ತಾಯಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡಲು ಕೂಡಾ ಅನುಕೂಲವಾಗಿದೆ. ಗೆಳೆಯ ಅರ್ಜುನ್ ನೆರವಿನಿಂದ MIT ಅಪ್ಲಿಕೇಶನ್, ಆಂಡ್ರಾಯ್ಡ್, ಅಡ್ಮೆಗಾ ನಿಯಂತ್ರಕ, ಪ್ಲಾಸ್ಟಿಕ್ ಸ್ಟೂಲ್, ಅಲ್ಯೂಮಿನಿಯಂ ಶೀಟ್, ಫೀಮೇಲ್ ಡಮ್ಮಿ, ಸರ್ವಿಂಗ್ ಪ್ಲೇಟ್ ಮುಂತಾದ ವಸ್ತುಗಳಿಂದ ರೋಬೋಟ್ ತಯಾರಿಸಿದ್ದಾರೆ. ಈ ರೋಬೋಟ್ ಅಲ್ಟ್ರಾಸಾನಿಕ್ ಸಂವೇದಕದೊಂದಿಗೆ ಕಾರ್ಯನಿರ್ವಹಿಸುತ್ತದೆ ಇದು ಸ್ವಯಂಚಾಲಿತ, ಮ್ಯಾನುಯಲ್ ಎಂಬ ಎರಡು ವಿಧಾನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ರೋಬೋಟ್ ಐದರಿಂದ ಆರು ಕೆಜಿ ತೂಕವನ್ನು ಹೊತ್ತೊಯ್ಯಬಲ್ಲದು.

ಈ ರೋಬೋಟ್ ತನ್ನ ತಾಯಿಯ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಿದೆ ಎಂದು ಶಿಯಾದ್ ಹೇಳಿದ್ದಾರೆ. ಈ ರೋಬೋಟ್ ಊಟ ಬಡಿಸುವುದು ಮತ್ತು ದಿನಪತ್ರಿಕೆ ತರುವುದು ಮುಂತಾದ ಮನೆಕೆಲಸಗಳನ್ನು ಮಾಡುತ್ತದೆ. ಈ ರೋಬೋಟ್ ತಯಾರಿಸಲು 10 ಸಾವಿರ ರೂ.ಖರ್ಚಾಗಿದ್ದು, ತಮ್ಮ ಮನೆಯಲ್ಲಿ ರೋಬೋಟ್ ನೋಡಲು ಅನೇಕರು ಮನೆಗೆ ಬರುತ್ತಿದ್ದು, ವಿದ್ಯಾರ್ಥಿ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!