ಅಮೆರಿಕಾದಲ್ಲಿ ಶ್ರೀವಾರಿ ಕಲ್ಯಾಣೋತ್ಸವ, ಟಿಟಿಡಿ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೂನ್ 18 ರಿಂದ ಜುಲೈ 9 ರವರೆಗೆ‌ ಅಮೆರಿಕಾದಲ್ಲಿ ಶ್ರೀವಾರಿ ಕಲ್ಯಾಣೋತ್ಸವ ನಡೆಸುವುದಾಗಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ. ʻಅಮೆರಿಕದಾದ್ಯಂತ ಏಳು ನಗರಗಳಲ್ಲಿ ಕಲ್ಯಾಣೋತ್ಸವ ನಡೆಯಲಿದೆ. ಉತ್ಸವಕ್ಕೆ ತಿರುಮಲದಿಂದ ಶ್ರೀವಾರು ಮತ್ತು ಅಮ್ಮನವರ ಮೂರ್ತಿಗಳನ್ನು ತೆಗೆದುಕೊಂಡು ಹೋಗಲು ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಅರ್ಚಕರನ್ನು ಅಮೆರಿಕಕ್ಕೆ ಕಳಿಸಿಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಪ್ರಚಾರದ ಭಾಗವಾಗಿ ಈ ಕಲ್ಯಾಣ ಮಹೋತ್ಸವಗಳನ್ನು ಆಯೋಜಿಸಲು ಟಿಟಿಡಿ ನಿರ್ಧರಿಸಿದೆʼ ಎಂದಿದ್ದಾರೆ.

ಅಮೆರಿಕದಲ್ಲಿರುವ ಭಕ್ತರು ಈ ಉತ್ಸವಗಳಲ್ಲಿ ಉಚಿತವಾಗಿ ಭಾಗವಹಿಸಬಹುದು. ಅಮೆರಿಕದ ವಿವಿಧ ರಾಜ್ಯಗಳಲ್ಲಿರುವ ಹಿಂದೂಗಳು ಮತ್ತು ತೆಲುಗು ಭಕ್ತರಿಗಾಗಿ ಎಪಿಎನ್ಆರ್‌ಟಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯುಕೆ, ದುಬೈ ಮತ್ತು ಕೆನಡಾದಂತಹ ದೇಶಗಳಲ್ಲಿನ ಭಕ್ತರೂ ಸಹ ತಮ್ಮ ದೇಶಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಬ್ಬಾರೆಡ್ಡಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!