ಯೋಧರ ಕಂಡು ಓಡೋಡಿ ಬಂದು ಕಾಲಿಗೆ ಎರಗಿತು ಕಂದಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯೋಧರು ನಿಂತಿರುವುದನ್ನು ಕಂಡು ಓಡೋಡಿ ಬಂದ ಕಂದಮ್ಮ ಅವರ ಕಾಲಿಗೆ ಎರಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ದೇಶ ಸೇವೆಯೇ ಈಶ ಸೇವೆ ಎಂದು ದೇಶದ ಹಿತಕ್ಕಾಗಿ ದೇಹಬದುಕಿನ ಹಂಗು ತೊರೆದು ಸೇವೆಯಲ್ಲಿ ನಿರತ ಯೋಧರನ್ನು ಕಂಡಾಗ ನಮ್ಮಲ್ಲಿ ಒಂದು ಗೌರವ ಹುಟ್ಟುತ್ತದೆ. ಅದೇ ರೀತಿ ಇಲ್ಲೊಂದು ಮಗು ನಿಂತಿದ್ದ ಯೋಧರ ಬಳಿ ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದೆ.

ಕಪ್ಪು ಬಣ್ಣದ ಫ್ರಾಕ್ ತೊಟ್ಟ ಮುದ್ದಾದ ಮಗು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸೈನಿಕರ ಬಳಿಗೆ ಓಡೋಡಿ ಹೋಗಿ ನಿಲ್ಲುತ್ತದೆ. ಆಗ ಅಲ್ಲಿಯೇ ಇನ್ನೊಬ್ಬರ ಸೈನಿಕರ ಜೊತೆ ಮಾತನಾಡುತ್ತಾ ನಿಂತಿದ್ದ ಸೈನಿಕ ಮಗುವನ್ನು ಕಂಡಾಕ್ಷಣ ಗಲ್ಲ ಹಿಡಿದು ಮಾತನಾಡಿಸುತ್ತಾರೆ. ಸೈನಿಕರ ಮುಖವನ್ನೇ ನೋಡುತ್ತಿದ್ದ ಮಗು ಕಾಲಿಗೆ ನಮಸ್ಕರಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಇದೀಗ ಎಲ್ಲೆಡೆ ಗಮನಸೆಳೆಯುತ್ತಿದ್ದು, ಮುಗ್ಧ ಮಗುವಿನ ಪ್ರೀತಿ ಗೌರವ ಕಂಡು ಎಲ್ಲರು ಮನಸೋತಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!