August 29, 2026
Saturday, August 29, 2026
spot_img

ಕಾಫಿತೋಟದಲ್ಲಿ ಕಳೆದುಹೋಗಿದ್ದ ಕಂದಮ್ಮ 12 ಗಂಟೆ ಬಳಿಕ ತಾಯಿ ಮಡಿಲಿಗೆ

ಹೊಸದಿಗಂತ ಟಿಜಿಟಲ್‌ ಡೆಸ್ಕ್:


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದ ಈ ಘಟನೆ ಯಾವುದೋ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಮಧ್ಯಪ್ರದೇಶ ಮೂಲದ ಗೋನು ಮತ್ತು ಸೋನು ಎಂಬ ದಂಪತಿ ಟೀ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಬಂದಿದ್ದರು.

ಈ ವೇಳೆ ಅವರ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಇತರ ಮಕ್ಕಳ ಜೊತೆ ಆಟವಾಡುತ್ತಾ, ದಟ್ಟವಾದ ಕಾಫಿ ತೋಟದೊಳಗೆ ಮರೆಯಾಗಿತ್ತು. ಸಂಜೆಯಾಗುತ್ತಿದ್ದಂತೆ ಮಗು ಕಾಣದಿದ್ದಾಗ ಕಂಗಲಾದ ಪೋಷಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಕಾಫಿ ತೋಟ ಎಂದರೆ ಅಲ್ಲಿ ಚಿರತೆ, ಹಾವುಗಳ ಭಯ ಇದ್ದೇ ಇರುತ್ತದೆ. ಅಂತಹ ಭಯಾನಕ ಕತ್ತಲಲ್ಲಿ, ಮಳೆಯ ನಡುವೆ ಬಾಳೂರು ಪೊಲೀಸರು ಮತ್ತು ಮೂಡಿಗೆರೆ ಸಿಪಿಐ ನೇತೃತ್ವದ ತಂಡ ಕಾರ್ಯಾಚರಣೆಗಿಳಿದು, ಸತತ 12 ಗಂಟೆಗಳ ಹುಡುಕಾಟದ ನಂತರ, ಇಂದು ಬೆಳಗ್ಗೆ ತೋಟದ ಒಂದು ಮೂಲೆಯಲ್ಲಿ ಭಯವಿಲ್ಲದೆ ಆರಾಮವಾಗಿ ಮಲಗಿರುವ‌ ಮಗು ಪತ್ತೆಯಾಗಿದೆ.

ಸತತ 12 ಗಂಟೆಗಳ ಕಾಲ ಕಾಣೆಯಾಗಿದ್ದ ಮಗುವನ್ನು ಪೊಲೀಸರು ಪುನಃ ತಾಯಿಯ ಮಡಿಲಿಗೆ ಸೇರಿಸಿದ್ದಾರೆ. ತಮ್ಮ ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಕಂಗಲಾಗಿದ್ದ ಪೋಷಕರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !