October 10, 2026
Saturday, October 10, 2026
spot_img

BREAKING NEWS | ಕನ್ನಡದ ಖ್ಯಾತ ಚಲನಚಿತ್ರ ನಟ ದಿಲೀಪ್‌ ರಾಜ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್‌ ರಾಜ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮನೆಯಲ್ಲಿದ್ದ ದಿಲೀಪ್‌ ರಾಜ್‌ಗೆ ಬೆಳಗಿನ ಜಾವ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿಲೀಪ್‌ ಕೊನೆಯುಸಿರೆಳೆದಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ದಿಲೀಪ್‌ ರಾಜ್‌ ಅವರನ್ನು ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ ಲವ್‌ ಮಾಕ್ಟೇಲ್‌-೩ ಸಿನಿಮಾದಲ್ಲಿ ನಟ ಕಾಣಿಸಿಕೊಂಡಿದ್ದರು. ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿಲ್ಲ.

ಬೆಳ್ಳಂಬೆಳಗ್ಗೆ ದಿಲೀಪ್‌ ರಾಜ್‌ ನಿಧನದ ಸುದ್ದಿ ಕೇಳಿ ಇಡೀ ಸ್ಯಾಂಡಲ್‌ವುಡ್‌ ಶಾಕ್‌ನಲ್ಲಿದೆ. ನಟನಾಗಿ, ನಿರ್ಮಾಪಕನಾಗಿ ಜನರ ಮನದಲ್ಲಿ ಖಾಯಂ ಜಾಗ ಮಾಡಿಕೊಂಡಿದ್ದ ದಿಲೀಪ್‌ ರಾಜ್‌ ಇನ್ನು ನೆನಪು ಮಾತ್ರ.

Must Read