ಸೂಪರ್ ಸ್ಟಾರ್‌ಗೆ ವಿಲನ್‌ ಆಗಿ ಮತ್ತೊಬ್ಬ ಸ್ಟಾರ್ ಹೀರೋ: ‘ಜೈಲರ್’ ಮೂಲಕ ಬೆಳ್ಳಿತೆರೆಯಲ್ಲಿ ಧೂಳೋ ಧೂಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಜನಿಕಾಂತ್..ಆ ಸ್ಟೈಲ್ ಮತ್ತು ಎನರ್ಜಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತಾರೆ. ಎಪ್ಪತ್ತರ ದಶಕದಲ್ಲೂ, ಆ ವೇಗ, ಆಕ್ಷನ್ ಮತ್ತು ಸಾಹಸ ದೃಶ್ಯಗಳನ್ನು ನೋಡಲು ಇಷ್ಟಪಡುತ್ತಾರೆ. ಇಂತಹ ಸ್ಟಾರ್‌ ಹೀರೋ ಜೊತೆಗೆ ಕನ್ನಡದ ಸ್ಟಾರ್‌ ಹೀರೋ ಜೊತೆಯಾದರೆ ಹೇಳಬೇಕೆ? 100%ಸಿನಿಮಾ ಧೂಳೆಬ್ಬಿಸುತ್ತದೆ.

ದಿಲೀಪ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ರಜನಿಕಾಂತ್‌ ಜೊತೆಗೆ ರಮ್ಯಾ ಕೃಷ್ಣ ಕೂಡ ನಟಿಸುತ್ತಿದ್ದಾರೆ. ಇವರಿಬ್ಬರೂ ನರಸಿಂಹ ಸಿನಿಮಾ  ಮೂಲಕ ಸೂಪರ್ ಹಿಟ್ ಗಳಿಸಿದ್ದರು. ಈಗ ಮತ್ತೊಮ್ಮೆ ಇವರಿಬ್ಬರೂ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಸಿನಿಮಾದ ಬಗ್ಗೆ ಒಳ್ಳೆಯ ನಿರೀಕ್ಷೆಗಳಿವೆ. ಈ ಸಖತ್ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ರಜಿನಿಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚೆನ್ನೈನಲ್ಲಿ ಚಿತ್ರೀಕರಣ ನಡೆಸುತ್ತಿರುವ ಜೈಲರ್‌ನ ಇತ್ತೀಚಿನ ಶೆಡ್ಯೂಲ್‌ಗೆ ಶಿವಣ್ಣ ಭಾಗಿಯಾದರು. ರಜನಿ ಮತ್ತು ಶಿವರಾಜ್ ಕುಮಾರ್ ಜೊತೆಗಿನ ಸ್ಟೈಲಿಶ್ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂದು ವರದಿಯಾಗಿದೆ. ಜೈಲರ್ ಸೆಟ್‌ನಲ್ಲಿರುವ ಶಿವಣ್ಣನ ಫೋಟೋವನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಮುಂದಿನ ವರ್ಷದ ಬೇಸಿಗೆ ಬಿಡುಗಡೆಗೆ ಸಜ್ಜಾಗಿರುವ ಜೈಲರ್ ಚಿತ್ರದ ಕಾಂಬಿನೇಷನ್ ದೃಶ್ಯಗಳನ್ನು 4-5 ದಿನಗಳಲ್ಲಿ ಮುಗಿಸಲು ಶಿವರಾಜ್ ಕುಮಾರ್ ಮತ್ತು ರಜನಿಕಾಂತ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ಕುಟುಂಬಕ್ಕೆ ರಜನಿಕಾಂತ್ ಜೊತೆ ಆತ್ಮೀಯ ಸಂಬಂಧವಿದ್ದು, ಶಿವರಾಜ್ ಕುಮಾರ್ ತಮ್ಮ ನೆಚ್ಚಿನ ನಟ ರಜನಿ ಜೊತೆ ತೆರೆ ಹಂಚಿಕೊಳ್ಳಲು ಖುಷಿಯಾಗಿದ್ದಾರೆ. ಇಬ್ಬರು ಸ್ಟಾರ್ ಹೀರೋಗಳು ಜೊತೆಯಾಗಿ ನಟಿಸಿದರೆ ಆ ಚಿತ್ರ ಬೆಳ್ಳಿತೆರೆಯಲ್ಲಿ ಧೂಳೆಬ್ಬಿಸಲಿದೆ ಅಂತಿದಾರೆ ಅಭಿಮಾನಿಗಳು. ಶಿವರಾಜ್ ಕುಮಾರ್ ಸೇರ್ಪಡೆಯಿಂದ ಜೈಲರ್ ಚಿತ್ರಕ್ಕೆ ಕನ್ನಡದ ಜೊತೆಗೆ ಹೊರಗೂ ಮಾರುಕಟ್ಟೆ ಹೆಚ್ಚಲಿದೆ. ಈಗಾಗಲೇ ಈ ಚಿತ್ರ ಒಳ್ಳೆ ಕಲೆಕ್ಷನ್ ಪಡೆಯಲಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!