ಯಂಗ್ ರೆಬಲ್ ಸ್ಟಾರ್ ನ ಮುಂದಿನ ಸಿನಿಮಾಗೆ ಜೋಡಿಯಾಗಿ ಕಾಂತಾರದ ‘ಲೀಲಾ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ವಿಶ್ವದಲ್ಲೇ ಸಕ್ಸಸ್ ಕಾಣುತ್ತಿದ್ದು, ಸಿನಿಮಾದ ‘ಲೀಲಾ’ (ಸಪ್ತಮಿ ಗೌಡ)ಗೆ ಈಗ ಸಖತ್ ಡಿಮಾಂಡ್ ಶುರುವಾಗಿದೆ.
ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಿಂದಲೂ ಸಪ್ತಮಿ ಗೌಡಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದೀಗ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುವ ಚಿತ್ರ ಕಾಳಿಯಲ್ಲಿ ಸಪ್ತಮಿ ಗೌಡ ಅಭಿಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಪೈಲ್ವಾನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಕುರಿತು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಸಪ್ತಮಿ ಗೌಡ ಅವರನ್ನು ಕೃಷ್ಣ ಭೇಟಿಯಾಗಿ ಸಿನಿಮಾದ ಕಥೆ ಮತ್ತು ಪಾತ್ರದ ಹಿನ್ನೆಲೆಯನ್ನು ಹೇಳಿದ್ದಾರೆ. ಬಹುಶಃ ಸಪ್ತಮಿ ಅವರೇ ಈ ಚಿತ್ರದ ನಾಯಕಿ ಎನ್ನುತ್ತಿದೆ ಗಾಂಧಿ ನಗರ ಮೂಲ. ಆದರೆ, ಈ ಕುರಿತು ಕೃಷ್ಣ ಆಗಲಿ ಅಥವಾ ಸಪ್ತಮಿ ಗೌಡ ಆಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಕಾಳಿ ಸಿನಿಮಾದ ಕಥೆಯೂ ರೋಚಕವಾಗಿದೆ. ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಪ್ರೇಮಕಥೆಯನ್ನು ಈ ಸಿನಿಮಾಗಾಗಿ ನಿರ್ದೇಶಕರು ಅಳವಡಿಸಿಕೊಂಡಿದ್ದಾರೆ. ಅಲ್ಲದೇ, ರೆಬಲ್ ಈ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!