ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್: ಟೆಸ್ಟ್ ​ನಲ್ಲಿ ಗರಿಷ್ಠ ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ 2ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಪಡೆಯುವ ಮೂಲಕ ಭಾರತ ತಂಡದ ಅನುಭವಿ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ಕಪಿಲ್ ದೇವ್​ ಹಿಂದಿಕ್ಕಿ ಗರಿಷ್ಠ ವಿಕೆಟ್ ಪಡೆದ ಭಾರತದ 2ನೇ ಬೌಲರ್​ ಎನಿಸಿಕೊಂಡಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಕಪಿಲ್​ ದೇವ್​ 131 ಟೆಸ್ಟ್​ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದರು. ಭಾರತದ ಪರ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅನಿಲ್​ ಕುಂಬ್ಳೆ(619) ಅಗ್ರ ಸ್ಥಾನದಲ್ಲಿದ್ದಾರೆ.
ಇದೀಗ ಭಾನುವಾರ ಚರಿತ್ ಅಸಲಂಕಾ ವಿಕೆಟ್ ಪಡೆಯುವ ಮೂಲಕ ಅಶ್ವಿನ್​ 435ನೇ ಟೆಸ್ಟ್​ ವಿಕೆಟ್ ಪಡೆದರು. ಅಶ್ವಿನ್​ 85 ಟೆಸ್ಟ್​ ಪಂದ್ಯಗಳಿಂದ 435 ವಿಕೆಟ್ ಪಡೆದು, ಈ ಮಾದರಿಯಲ್ಲಿ ಹೆಚ್ಚು ವಿಕೆಟ್​ ಪಡೆದಿರುವ ವಿಶ್ವದ 9ನೇ ಬೌಲರ್​ ಎನಿಸಿಕೊಂಡಿದ್ದಾರೆ.
ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುರಳೀಧರನ್​ 800 ವಿಕೆಟ್​ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದು, ಆಸ್ಟ್ರೇಲಿಯಾದ ಶೇನ್ ವಾರ್ನ್​(708), ಇಂಗ್ಲೆಂಡ್​ನ ಜೇಮ್ಸ್ ಆ್ಯಂಡರ್ಸನ್​(640), ಭಾರತದ ಅನಿಲ್ ಕುಂಬ್ಳೆ(619), ಆಸ್ಟ್ರೇಲಿಯಾದ ಗ್ಲೇನ್ ಮೆಗ್​ಗ್ರಾತ್(563), ಇಂಗ್ಲೆಂಡ್​ ಸ್ಟುವರ್ಟ್ ಬ್ರಾಡ್​(537) ವಿಂಡೀಸ್​ನ ಕರ್ಟ್ನಿ ವಾಲ್ಶ್​(519), ದ.ಆಫ್ರಿಕಾದ ಡೇಲ್ ಸ್ಟೇನ್(439) ಮೊದಲ ಸರದಿಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!