ತೆರೆ ಮೇಲೆ ಬರಲಿದೆ ಕಪಿಲ್ ಶರ್ಮಾ ಬಯೋಪಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗಿಸೋ ಶೋ ಎಂದರೆ ಮೊದಲು ನೆನಪಾಗೋದು ಕಪಿಲ್ ಶರ್ಮಾ ಶೋ. ಎಲ್ಲರ ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಗಿಸುವ ಕಪಿಲ್ ಶರ್ಮಾ ಈ ಶೋ ಬರೋಕಿಂತ ಮುಂಚೆ ಏನಾಗಿದ್ದರು? ಇಷ್ಟು ಯಶಸ್ವಿ ಶೋ ನಡೆಸಲು ಅವರು ಹತ್ತಿದ ಮೆಟ್ಟಿಲುಗಳ್ಯಾವುದು?
ಈ ಎಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗುತ್ತಿದೆ. ಹೌದು, ಕಪಿಲ್ ಶರ್ಮಾ ಕುರಿತಾದ ಬಯೋಪಿಕ್ ಬರುತ್ತಿದೆ. ಇದಕ್ಕೆ ‘ಫನ್‌ಕಾರ್’ ( funkaar)  ಎಂದು ಹೆಸರಿಡಲಾಗಿದೆ. ಮೃಗದೀಪ್ ಸಿಂಗ್ ಲಂಬಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಇದೀಗ ಬಯೋಪಿಕ್‌ಗಳದ್ದೇ ಟ್ರೆಂಡ್ ಆಗಿದ್ದು, ಸಿಕ್ಕಾಪಟ್ಟೆ ಹಿಟ್ ಕೂಡ ಆಗುತ್ತಿವೆ. ಇದೇ ಸಾಲಿಗೆ ಕಪಿಲ್ ಶರ್ಮಾರ ಫನ್‌ಕಾರ್ ಕೂಡ ಸೇರುತ್ತದಾ? ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!