ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ

ಹೊಸದಿಗಂತ ವರದಿ, ಅಂಕೋಲಾ:
ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಸಕಲಬೇಣದಲ್ಲಿ ಶುಕ್ರವಾರ ತಡ ರಾತ್ರಿ ಸಮಯದಲ್ಲಿ ನಡೆದಿದೆ.
ಅವರ್ಸಾ ಸಕಲಬೇಣ ನಿವಾಸಿ ವಿನೋದ ಮೊನ್ನಾ ಆಗೇರ(39) ಮೃತ ವ್ಯಕ್ತಿಯಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದ ಈತನ ಸರಾಯಿ ಕುಡಿತದ ಚಟದಿಂದ ಬೇಸತ್ತು ಸುಮಾರು 12 ವರ್ಷಗಳ ಹಿಂದೆ ಹೆಂಡತಿ ಈತನನ್ನು ಬಿಟ್ಟು ಹೋಗಿದ್ದರಿಂದ ತನ್ನ ಮೂಲ ಮನೆಯ ಪಕ್ಕದಲ್ಲೇ ಒಬ್ಬನೇ ವಾಸವಾಗಿದ್ದ ಎನ್ನಲಾಗಿದೆ.
ಶುಕ್ರವಾರ ವಾರ ರಾತ್ರಿ ಈತನ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಹೆಂಡತಿ ಬಿಟ್ಟು ಹೋಗಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಬೇರೆ ಯಾವುದೋ ವಿಷಯದಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಮೃತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!