ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಚಿತ್ರ ಗಾಡ್ ಫಾದರ್. ಈ ಚಿತ್ರ ಬಿಡುಗಡೆಯಾಗಿ 50 ವರ್ಷಗಳ ನಂತರ ಮತ್ತೆ ರಿಲೀಸ್ ಆಗುತ್ತಿದೆ.
ಹೌದು, ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಪ್ಯಾರಾಮೌಂಟ್ ಘೋಷಣ ಮಾಡಿದ್ದು, ಗಾಡ್ ಫಾದರ್ ಬಿಡುಗಡೆಯಾದ 50 ವರ್ಷಗಳ ನಂತರ ಮತ್ತೆ ಸೀಮಿತ ಚಿತ್ರಮಂದಿರಗಳಲ್ಲಿ ಫೆ.25ರಂದು ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದಿದೆ.
ಈ ಚಿತ್ರದಲ್ಲಿ ರಾಬರ್ಟ್ ಡಿನೈರೊ, ಅಲ್ ಪೆಚಿನೋ, ಜೇಮ್ಸ್ ಕಾನದ ಸೇರಿದಂತೆ ಹಲವು ಕಲಾವಿದರ ನಟನೆ ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಕುಳಿತಿದೆ. ಇದು ಮಾರಿಯೊ ಪೂಜೋ ಅವರ ಗಾಡ್ ಫಾದರ್ ಕಾದಂಬರಿಯ ಸರಣಿ ಆಧರಿಸಿದ ಸಿನಿಮಾ.
ಈ ಸಿನಿಮಾದ ಬಿಡುಗಡೆ ಬಗ್ಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.