ರಾಜ್ಯದಲ್ಲಿನ ರಸ್ತೆ ದುರಸ್ತಿಗೆ ಮುಂದಾದ ಲೋಕೋಪಯೋಗಿ ಇಲಾಖೆ: 310 ಕೋಟಿ ರೂ. ಅನುದಾನ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಳೆ ಹಾಗೂ ಪ್ರವಾಹದಿಂದ ರಾಜ್ಯದ ಬಹುತೇಕ ರಸ್ತೆಗಳು ಹಾನಿಗೊಳಗಾಗಿದ್ದು, ಇದರ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ 310 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ರಸ್ತೆ ಹಾಗೂ ಮೂಲಸೌಕರ್ಯಗಳು ಸೇರಿ ಸುಮಾರು 7 ಸಾವಿರ ಕಿ.ಮೀ. ರಸ್ತೆ ಹಾಳಾಗಿದೆ. ಅದರಲ್ಲಿ 4850 ಕಿಮೀ. ಜಿಲ್ಲೆಯೊಳಗಿನ ರಸ್ತೆಗಳಾದರೆ, 2236 ಕಿ.ಮೀ ರಾಜ್ಯದ ಹೆದ್ದಾರಿಗಳಾಗಿವೆ.
ಅಷ್ಟು ಮಾತ್ರವಲ್ಲದೆ 1500ಕ್ಕೂ ಅಧಿಕ ಸೇತುವೆಗಳು ಕೊಚ್ಚಿಹೋಗಿವೆ. ಇದೀಗ ಇದರ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಈ ದುರಸ್ತಿ ಕೆಲಸಕ್ಕೆ ಸುಮಾರು 730 ಕೋಟಿ. ರೂ. ಗಳ ಅಗತ್ಯವಿದೆ.
ಉತ್ತರ ವಲಯಕ್ಕೆ 230 ಕೋಟಿ ರೂ. ಕೇಂದ್ರ ವಲಯಕ್ಕೆ 38 ಲಫಟೊ ರೂ. ಈಶಾನ್ಯಕ್ಕೆ 15 ಕೋಟಿ ರೂ. ದಕ್ಷಿಣ ವಲಯಕ್ಕೆ 45 ಕೋಟಿ ರೂ. ಮಂಜೂರು ಮಾಡಲಾಗಿದೆ. ಒಟ್ಟು ಕಾರ್ಯಗತಗೊಂಡಿರುವ 766 ಯೋಜನೆಗಳಿಗೆ  310 ಕೋಟಿ ರೂ. ಮಂಜೂರು ಮಾಡಲಾಗಿದೆ.
ಇನ್ನು ಹಾನಿಗೊಳಗಅದ ಕರಾವಳಿ ಪ್ರದೇಶದ ಸೇತುವೆಗಳ ಕಾಮಗಾರಿಗೆ ಬಜೆಟ್‌ ನಲ್ಲಿ ಮೀಸಲಿಟ್ಟ 200 ಕೋಟಿ ರೂ. ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!