27 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದ ಶಿಕ್ಷಣ ಇಲಾಖೆ: ಯಾವ ಜಿಲ್ಲೆಗೆ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಶುರುವಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.

ಒಟ್ಟು 33 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಪಾಠಮಾಡಲು ಒಟ್ಟು 27 ಸಾವಿರ ಹಾಗೂ ಪ್ರೌಢಶಾಲೆಗಳಲ್ಲಿ ಪಾಠ ಮಾಡಲು ಒಟ್ಟು 6 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ನೇಮಕಗೊಳ್ಳುವ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ 10,000 ರೂ. ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10,500 ರೂ. ಗೌರವಧನ ನೀಡಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಖಾಲಿ ಹುದ್ದೆಗಳಿವೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳಿವೆ ಇಲ್ಲಿ ತಿಳಿಯಿರಿ.

ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ:

ಬೆಳಗಾವಿ 1046, ಬಾಗಲಕೋಟೆ 1130, ವಿಜಯಪುರ 1115, ಕಲಬುರಗಿ 1706, ಬೀದರ್ 681, ರಾಯಚೂರು 1540, ಕೊಪ್ಪಳ 1035, ಗದಗ 471, ಧಾರವಾಡ 540, ಉತ್ತರ ಕನ್ನಡ 250 ಹುದ್ದೆಗಳು.

ಹಾವೇರಿ 617, ಬಳ್ಳಾರಿ 540, ಚಿತ್ರದುರ್ಗ 571, ದಾವಣಗೆರೆ 979, ಶಿವಮೊಗ್ಗ 731, ಉಡುಪಿ 312, ಚಿಕ್ಕಮಗಳೂರು 430, ತುಮಕೂರು 585, ಕೋಲಾರ 499, ಬೆಂಗಳೂರು ದಕ್ಷಿಣ 573, ಬೆಂಗಳೂರು ಗ್ರಾಮಾಂತರ 367, ಮಂಡ್ಯ 827 ಹುದ್ದೆಗಳು.

ಹಾಸನ 712, ದಕ್ಷಿಣ ಕನ್ನಡ 828, ಕೊಡಗು 259, ಮೈಸೂರು 1090, ಚಾಮರಾಜನಗರ 409, ಬೆಂಗಳೂರು ಉತ್ತರ 186, ಚಿಕ್ಕಬಳ್ಳಾಪುರ 551, ಚಿಕ್ಕೋಡಿ 1673, ಮಧುಗಿರಿ 553, ರಾಮನಗರ 561, ಯಾದಗಿರಿ 1364, ಶಿರಸಿ 584, ವಿಜಯನಗರ 1685 ಹುದ್ದೆಗಳಿಗೆ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ನೇಮಕಾತಿ ಆದೇಶ:

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!