ರಾಜ್ಯ ಸರ್ಕಾರದ ಆದೇಶ ಪ್ರತಿಯಲ್ಲಿ ಕನ್ನಡದ ಕೊಲೆ: ಎಲ್ಲೆಡೆ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಸರ್ಕಾರದ ಆದೇಶದ ಪ್ರತಿಯಲ್ಲಿ ಅಕ್ಷರ ದೋಷಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ಹಿಂಪಡೆದ ಪ್ರತಿಯಲ್ಲಿ ತಪ್ಪುಗಳೇ ತುಂಬಿ ಹೋಗಿವೆ. ಸರ್ಕಾರದ ಆದೇಶದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಆದೇಶ ಹಿಂಪಡೆಯಲಾಗಿತ್ತು. ಹೊರಡಿಸಿದ ಸುತ್ತೋಲೆಯಲ್ಲಿ ಹೆಚ್ಚಿನ ಅಕ್ಷರ ದೋಷದಿಂದಾಗಿ ಇದೀಗ ರಾಜ್ಯಾದ್ಯಂತ ಟ್ರೋಲ್‌ ಆಗುತ್ತಿದೆ.

ರಾಜ್ಯ ಸರ್ಕಾರದ ಆದೇಶ ಪ್ರತಿಯಲ್ಲೇ ಹೀಗಾದರೆ..? ಕನ್ನಡದ ಗತಿಯೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅಧಿಕಾರಿಗಳು ನಿದ್ದೆ ಮಂಪರಿನಲ್ಲಿ ಈ ಮರು ಆದೇಶ ಹೊರಡಿಸಿದಂತಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!