ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ: ಬಿ.ಇಡಿ ಪರೀಕ್ಷೆಯ Rank ಪ್ರಕಟ

ಹೊಸದಿಗಂತ ವರದಿ, ಅಂಕೋಲಾ:

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 2019 ರಿಂದ 2021 ನೇ ಸಾಲಿನ ಬಿ.ಇಡಿ ಪರೀಕ್ಷೆಯ ರ್ಯಾಂಕ್ ಪ್ರಕಟಿಸಿದ್ದು ಅಂಕೋಲಾದ ಕೆ.ಎಲ್. ಇ ಶೈಕ್ಷಣಿಕ ಮಹಾವಿದ್ಯಾಲಯ 4 ರ್ಯಾಂಕುಗಳನ್ನು ಪಡೆಯುವ ಮೂಲಕ ಸತತ 8 ನೇ ವರ್ಷವೂ ವಿಶ್ವ ವಿದ್ಯಾಲಯದ ರ್ಯಾಂಕ್ ಸಾಧನೆ ಮುಂದುವರಿಸಿದೆ.

ಪೂರ್ವಿ ಹಳಗೇಕರ್ 95.04 ಪ್ರತಿಶತ ಸಾಧನೆಯೊಂದಿಗೆ ವಿಶ್ವ ವಿದ್ಯಾಲಯಕ್ಕೆ ಮೊದಲನೇ ರ್ಯಾಂಕ್ ಪಡೆದರೆ ಕಾಂಚನಾ ಗುನಗಾ 93.88 ಪ್ರತಿಶತ ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್, ಮೇಘನಾ ಮಡಿವಾಳ 93.38 ಅಂಕಗಳೊಂದಿಗೆ ತೃತೀಯ ರ್ಯಾಂಕ್ ಹಾಗೂ ಪೂಜಾ ಮಡಿವಾಳ 92.79 ಅಂಕಗಳೊಂದಿಗೆ 10 ನೇ ರ್ಯಾಂಕ್ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕೆ.ಎಲ್. ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬಿ.ಇಡಿ ವಿಭಾಗದ ಅಧ್ಯಕ್ಷ ಡಾ.ಜಯಾನಂದ ಮುನವಳ್ಳಿ,,ನಿರ್ದೇಶಕ ಬಿ ಆರ್. ಪಾಟೀಲ್, ಸದಸ್ಯ ಕಾರ್ಯದರ್ಶಿ ಮಹಾದೇವ ಬಳಿಗಾರ, ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ದಿನೇಶ ಭಟ್ಕಳ, ಸಂಯೋಜಕ ಆರ್. ನಟರಾಜ, ಸದಸ್ಯೆ ಡಾ ಮೀನಲ ನಾರ್ವೇಕರ್, ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!