Tuesday, June 6, 2023

Latest Posts

ವಾರಾಂತ್ಯ ಕರ್ಫ್ಯೂ, ಶಾಲೆಗಳು ಮತ್ತೆ ಆನ್ಲೈನ್ ಸೀಮಿತ, ಧರಣಿ-ಪ್ರತಿಭಟನೆಗಳಿಗಿಲ್ಲ ಅವಕಾಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೋವಿಡ್ ಪಾಸಿಟಿವಿಟಿ ದರ ತೀವ್ರವಾಗಿ ಹೆಚ್ಚಿದೆ ಎಂಬ ಕಾರಣ ಮುಂದುಮಾಡಿ ಕರ್ನಾಟಕ ಸರ್ಕಾರ ವಾರಾಂತ್ಯ ಕರ್ಫ್ಯೂ ಘೋಷಿಸಿದೆ.

ಈಗಿರುವ ರಾತ್ರಿ 10ರಿಂದ ಬೆಳಗ್ಗೆ ಐದರವರೆಗಿನ ಪ್ರತಿಬಂಧ ರಾಜ್ಯಾದ್ಯಂತ ಮುಂದುವರಿಯಲಿದ್ದು, ಹೆಚ್ಚುವರಿಯಾಗಿ ಇನ್ನೆರಡು ವಾರಗಳ ಕಾಲ ವಾರಾಂತ್ಯ ಕರ್ಫ್ಯೂ ಇರಲಿದೆ. ಶುಕ್ರವಾರ ಸಂಜೆ ಐದು ಗಂಟೆಯಿಂದಲೇ ಇದು ಜಾರಿಗೆ ಬರಲಿದೆ.

ಕಚೇರಿಗಳು ಐದೇ ದಿನ ಕಾರ್ಯನಿರ್ವಹಣೆ, ಉಳಿದಂತೆ ಸರ್ಕಾರಿ ಕಚೇರಿಗಳಲ್ಲಿ ಶೇ. 50ರ ಸಿಬ್ಬಂದಿ ನಿಯೋಜನೆ.

ತರಗತಿ 10, 12 ಮತ್ತು ಮೆಡಿಕಲ್ ಹಾಗೂ ನರ್ಸಿಂಗ್ ಹೊರತುಪಡಿಸಿದರೆ ಉಳಿದೆಲ್ಲ ಶಾಲೆಗಳೂ ಆನ್ಲೈನ್ ನಲ್ಲಿ ಮಾತ್ರ.

ಹೊಟೆಲ್, ಮಾಲ್ ಇತ್ಯಾದಿ ವ್ಯಾವಹಾರಿಕ ಕೇಂದ್ರಗಳು ಶೇ. 50ರ ಪ್ರವೇಶದಡಿ ಕಾರ್ಯನಿರ್ವಹಿಸಬಹುದು. ಆದರೆ, ಸಂಪೂರ್ಣ ಲಸಿಕೆ ಪಡೆದವರನ್ನು ಮಾತ್ರ ಬಿಟ್ಟುಕೊಳ್ಳಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!