ಹೊಸದಿಗಂತ ವರದಿ,ವಿಜಯಪುರ:
ವಿಜಯಪುರ ವಾಟರ್ ಬೋರ್ಡ್ ಎಇಇ ಬಾಬು ನಾದಾಫ್ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಕಾರ್ಮಿಕರನ್ನು ಪೂರೈಕೆ ಮಾಡುವ ಗುತ್ತಿಗೆದಾರ ಸಗರ ಎಂಬುವವರಿಂದ 50 ಸಾವಿರ ರೂಪಾಯಿ ಲಂಚ ಸ್ವೀಕರಿಸೋ ವೇಳೆ ಬಾಬು ನಾದಾಫ್ ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್ಸ್ಪೆಕ್ಟರ್ ಗಳಾದ ಪರಮೇಶ್ವರ ಹಾಗೂ ಚಂದ್ರಕಲಾ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.ಈ ಸಂಬಂಧ ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.