Tuesday, June 6, 2023

Latest Posts

ದಿನಭವಿಷ್ಯ: ಹಠಮಾರಿ ಧೋರಣೆ ಬಿಟ್ಟುಬಿಡಿ, ಇತರರ ಮಾತಿಗೂ ಬೆಲೆ ಕೊಡಿ!

ಬುಧವಾರ, 5 ಜನವರಿ 2022, ಮಂಗಳೂರು

ಮೇಷ
ಕೌಟುಂಬಿಕ ಒತ್ತಡದಿಂದ ಭಿನ್ನಮತ ಏರ್ಪಟ್ಟೀತು. ಮಾತನಾಡಿ ಅದನ್ನು ಪರಿಹರಿಸಿ. ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ.

ವೃಷಭ
ಚಾಲನೆಯಲ್ಲಿ ಇಂದು ಎಚ್ಚರ ವಹಿಸಿ. ಸಂಚಾರಿ ನಿಯಮ ಪಾಲಿಸಿ. ಶೀತದಂತಹ ಅನಾರೋಗ್ಯ ಕಾಡಬಹುದು. ಕೌಟುಂಬಿಕ ಭಿನ್ನಮತ.

ಮಿಥುನ
ಮಾತುಗಳು ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಏಕೆಂದರೆ  ವಾಗ್ವಾದ ಸಂಭವಿಸುವ ಲಕ್ಷಣಗಳಿವೆ. ಇತರರ ಜಗಳದಲ್ಲಿ ನೀವು ಹಸ್ತಕ್ಷೇಪ ಮಾಡದಿರಿ.

ಕಟಕ
ವೃತ್ತಿಯಲ್ಲಿ ಒತ್ತಡ. ಹಣದ ಮುಗ್ಗಟ್ಟು ಕಾಡಬಹುದು. ಮನೆಯಲ್ಲಿ ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಸಂಯಮ ವಹಿಸಿರಿ.

ಸಿಂಹ
ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ದೇಹಾಲಾಸ್ಯ ಉಂಟಾದೀತು. ಕೌಟುಂಬಿಕ ಸೌಹಾರ್ದ. ಭಿನ್ನಮತವಿದ್ದರೂ ಪರಿಹಾರ ಕಾಣುವುದು.

ಕನ್ಯಾ
ವೃತ್ತಿಯಲ್ಲಿನ ಸಮಸ್ಯೆ ಎದುರಿಸಲು ಮುಂದಾಗಿ. ಅದನ್ನು ಹಾಗೇ ಬಿಟ್ಟುಬಿಡಬೇಡಿ. ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯದಿರಿ.

ತುಲಾ
ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಹೆಚ್ಚುವರಿ ಕೆಲಸದ ಹೊಣೆಗಾರಿಕೆ. ಒತ್ತಡ ಹೆಚ್ಚಿದರೂ, ಧನಲಾಭವೂ ಇದೆ. ಉದ್ಯೋಗ ಬದಲಾವಣೆ ಅವಕಾಶವಿದೆ.

ವೃಶ್ಚಿಕ
ಕೆಲಸದ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ. ಸಂಘರ್ಷವೂ ನಡೆದೀತು. ಮನೆಯಲ್ಲಿನ ಶಾಂತ ಪರಿಸರದಿಂದ ಮನಸ್ಸು ಶಾಂತವಾಗುವುದು.

ಧನು
ಹಣದ ಹರಿವು ಹೆಚ್ಚು. ಹಾಗೆಂದು ಸಿಕ್ಕಾಬಟ್ಟೆ ಖರ್ಚಿಗಿಳಿಯದಿರಿ. ಇತರರ ಹರಡುವ ವದಂತಿಗೆ ಕಿವಿಗೊಡದಿರಿ. ಇಲ್ಲವಾದರೆ ಮನಸ್ಸಿನ ಶಾಂತಿ ಹಾಳು.

ಮಕರ
ಮನೆಯವರ ಹಿತಾಸಕ್ತಿ ಗಮನಿಸಿ. ಅವರ ಬೇಕುಬೇಡಕ್ಕೆ ಕಿವಿಗೊಡಿ. ಅಜೀರ್ಣ ದಂತಹ ಸಮಸ್ಯೆ ಕಾಡೀತು. ಆಹಾರ ಸೇವನೆ ಚೆನ್ನಾಗಿರಲಿ.

ಕುಂಭ
ಸಮಯದೊಳಗೆ ನಿಮ್ಮ ಕೆಲಸ ಮುಗಿಸಲು ಕಷ್ಟಪಡುವಿರಿ. ಇದರಿಂದ ಮಾನಸಿಕ ಒತ್ತಡ ಹೆಚ್ಚು. ಇತರರ ನೆರವು ಕೇಳುವುದರಲ್ಲಿ ತಪ್ಪಿಲ್ಲ, ಬಿಗುಮಾನ ಬಿಡಿ.

ಮೀನ
ಮನೆಯಲ್ಲಿ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡಿ. ಇದರಿಂದ ಸಂಭವನೀಯ ಭಿನ್ನಮತ ತಪ್ಪಿಸ ಬಹುದು. ಹಠಮಾರಿ ಧೋರಣೆ ಬಿಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!