August 15, 2026
Saturday, August 15, 2026
spot_img

ಕಾರವಾರ: ಧ್ವಜಾರೋಹಣದ ಬೆನ್ನಲ್ಲೇ ಬೆಳಕಿನ ಕೊರತೆ; ಭಾಷಣ ಓದಲು ಉಸ್ತುವಾರಿ ಸಚಿವರ ಪರದಾಟ

ಹೊಸದಿಗಂತ ವರದಿ ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕ ಧ್ವಜಾರೋಹಣವನ್ನು ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನೆರವೇರಿಸಿದ ಜಿಲ್ಲೆಯ ನೂತನ ಉಸ್ತುವಾರಿ ಸಚಿವ ಭಾಷಣ ಓದಲು ಬೆಳಕಿನ ಕೊರತೆಯಿಂದ ಪರದಾಡುವಂತಾಯಿತು.

ಮೋಡ ಮತ್ತು ಮಳೆಯ ವಾತಾವರಣ ಇರುವ ಕಾರಣ ವೇದಿಕೆಯ ಮೇಲೆ ಬೆಳಕಿನ ಕೊರತೆ ಎದುರಾಯಿತಲ್ಲದೇ, ವೇದಿಕೆಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಸಚಿವರು ತಡವರಿಸುತ್ತಲೇ ಭಾಷಣ ಓದುವಂತಾಯಿತು.

ಸಚಿವರು ತಮ್ಮ ಮೊಬೈಲ್ ಪೋನಿನ ಟಾರ್ಚ್ ಲೈಟ್ ಬೆಳಗಿಸಿ ಕೆಲ ಕಾಲ ಭಾಷಣ ಓದಿರುವುದು ವಿಶೇಷವಾಗಿ ಗಮನ ಸೆಳೆಯಿತು. ಕೊನೆಗೂ ಜಿಲ್ಲಾಡಳಿತ ವೇದಿಕೆಯ ಮೇಲಿನ ಭಾಷಣದ ವ್ಯವಸ್ಥೆಯನ್ನು ಸ್ವಲ್ಪ ಬೆಳಕು ಬರುವಲ್ಲಿ ಬದಲಾಯಿಸಿ ಭಾಷಣಕ್ಕೆ ಅನುಕೂಲ ಕಲ್ಪಿಸಿದ ನಂತರ ಸಚಿವರು ಭಾಷಣ ಮುಂದುವರಿಸಿದರು.

ಇದನ್ನೂ ಓದಿ:

ಅವ್ಯವಸ್ಥೆಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಲಕ್ಷ್ಮಣ ಸವದಿ ಪ್ರಮುಖ ಕಾರ್ಯಕ್ರಮಗಳಲ್ಲಿ ಬೆಳಕಿನ ಅಭಾವ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಲವು ಯೋಜನೆಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡು ರಾಜ್ಯದ ವಿವಿಧ ಭಾಗಗಳಿಗೆ ಬೆಳಕು ನೀಡುವ ಜಿಲ್ಲೆಯ ಬುಡದಲ್ಲಿನ ಕತ್ತಲೆ ಸ್ವಾತಂತ್ರ್ಯ ಬಂದು 80 ವರ್ಷಗಳಿಗೆ ತಲುಪಿದರೂ ಹಾಗೇ ಇದೆ ಎಂದು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಮಂತ್ರಿಗಳಿಗೆ ಈ ಘಟನೆ ಸೂಚಿಸುವಂತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !