ಮಳೆ ಮಳೆಯೋ ಮಳೆ: ಕಾಸರಗೋಡು ಕೇರಳಕ್ಕೇ ನಂಬರ್ ಒನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಪಾರ ಹಾನಿ ನಷ್ಟಗಳ ನಡುವೆಯೂ ಈ ಬಾರಿಯ ಮಳೆಗಾಲದಲ್ಲಿ ಕಾಸರಗೋಡು ಜಿಲ್ಲೆಯು ಕೇರಳದಲ್ಲಿಯೇ ಅತ್ಯಂತ ಮಳೆಯಾಗುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಾರಿ ಜೂ.1ರಿಂದ ಜು.10ರ ತನಕ ಕಾಸರಗೋಡು ಜಿಲ್ಲೆಯಲ್ಲಿ ಬರೋಬ್ಬರಿ 1302 ಮಿಮೀ ಮಳೆಯಾಗಿದೆ. ಮಳೆಗಾಲ ಆರಂಭದ ಮೊದಲ ತಿಂಗಳಿನಲ್ಲಿ ಕೇವಲ 428 ಮಿಮೀ ಮಳೆಯಾಗಿ ಆತಂಕ ಉಂಟಾಗಿತ್ತು. ಅದಾದ ಬಳಿಕ ಮಳೆ ತೀವ್ರತೆ ಪಡೆದುಕೊಂಡಿದ್ದು, ಇದೀಗ ಹೊಸ ದಾಖಲೆಯನ್ನು ಬರೆದಿದೆ.

ಈ ನಡುವೆ ಜಿಲ್ಲೆಯಾದ್ಯಂತ ಮಳೆ ಇನ್ನಷ್ಟು ತೀವ್ರಗೊಂಡಿದೆ. ಇಂದು ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ. ಮಳೆಯೊಂದಿಗೆ ಹಾನಿ ನಷ್ಟಗಳ ಪ್ರಮಾಣವೂ ಹೆಚ್ಚಳವಾಗುತ್ತಿದ್ದು, ಜೀವನದಿಗಳು ಕೂಡಾ ಅಪಾಯದ ಮಟ್ಟದಲ್ಲಿ ಹರಿದು ಆತಂಕ ಉಂಟುಮಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!