ವೈರಲ್ ವಿಡಿಯೊ- ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯೋಧರಿಗೆ ತ್ರಿವರ್ಣ ನೀಡಿದ ಪುಟಾಣಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮನೆ ಮನೆಗೂ ತ್ರಿವರ್ಣ ಎಂಬ ಘೋಷ ದೇಶವಾಸಿಗಳನ್ನು ಗೆದ್ದಿದೆ. ತಿರಂಗಾ ಯಾತ್ರೆಗಳು, ಅಬಾಲವೃದ್ಧರಾದಿಯಾಗಿ ಮನೆಗಳಲ್ಲಿ ಧ್ವಜಾರೋಹಣ ಇತ್ಯಾದಿ ಚಟುವಟಿಕೆಗಳು ದೇಶದೆಲ್ಲೆಡೆ ಹಬ್ಬದ ವಾತಾವರಣವನ್ನೇ ನಿರ್ಮಿಸಿವೆ. ಇಂಥ ಸಂದರ್ಭದಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿಂತಿದ್ದ ಭದ್ರತಾ ಪಡೆಯ ಯೋಧರನ್ನು ಸಮೀಪಿಸಿದ ಪುಟ್ಟ ಹುಡುಗನೊಬ್ಬ ಒಬ್ಬ ಯೋಧಗೆ ತ್ರಿವರ್ಣ ನೀಡಿ ಗೌರವ ಸಲ್ಲಿಸಿದ ದೃಶ್ಯವನ್ನೀಗ ಟ್ವಿಟ್ಟರಿನಲ್ಲಿ ಹಲವರು ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ಎಲ್ಲರ ಮನವನ್ನು ಭಾವ ಸಂಪನ್ನಗೊಳಿಸುತ್ತಿವೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here