Saturday, March 25, 2023

Latest Posts

ಹೊಟ್ಟೆನೋವು ಹೋಗಿಸೋ ಮಾತ್ರೆ ಕುಡಿದು ಹೊಟ್ಟೆನೋವಿನಿಂದ ಬಳಲಿದ ವಿದ್ಯಾರ್ಥಿಗಳು!

ದಿಗಂತ ವರದಿ ವಿಜಯಪುರ:

ಜಂತುಹುಳು ನಿವಾರಕ ಮಾತ್ರೆ ಸೇವಿಸಿ ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿಯಿಂದ ಬಳಲಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಬಿಸಿ ಊಟದ ನಂತರ 150 ವಿದ್ಯಾರ್ಥಿಗಳಿಗೆ ಡಿಇಸಿ ಮಾತ್ರೆಗಳನ್ನು ನೀಡಲಾಗಿದೆ. ಆದರೆ, ಇದರಲ್ಲಿ 8 ಹಾಗೂ ಪಟ್ಟಣದ ಆದರ್ಶ ಮಹಾವಿದ್ಯಾಲಯದ ಓರ್ವ ವಿದ್ಯಾರ್ಥಿಗೆ ಹೊಟ್ಟೆ ನೋವು, ವಾಂತಿ, ತಲೆಸುತ್ತು ಕಾಣಿಸಿಕೊಂಡಿದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಓಆರ್ ಎಸ್ ನೀಡಲಾಗಿದೆ. ಆದರೆ, ಹೊಟ್ಟೆನೋವು, ತಲೆಸುತ್ತು ಹೆಚ್ಚಾಗಿದಕ್ಕೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!