Tuesday, March 28, 2023

Latest Posts

ಏರ್‌ ಶೋ : ಬೆಂಗಳೂರು ಏರ್​ಪೋರ್ಟ್​ನಲ್ಲಿ 10 ದಿನಗಳ ಕಾಲ ವಿಮಾನ ಹಾರಾಟ ವ್ಯತ್ಯಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ ಶೋ ಹಿನ್ನೆಲೆಯಲ್ಲಿ ಫೆಬ್ರವರಿ 8, 2023 ರಿಂದ 10 ದಿನಗಳ ಕಾಲ ವಿಮಾನ ಹಾರಾಟದ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಿದೆ.

ಏರೋ ಇಂಡಿಯಾ 2023ರ 14 ನೇ ಆವೃತ್ತಿಯ ಇಂಡಿಯಾ ಪೆವಿಲಿಯನ್ ಪ್ರಾಯೋಗಿಕ ಏರ್ ಶೋ ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 13 ರಿಂದ 17ರವರೆಗೆ ಆಯೋಜಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಕಾರ್ಯಾಚರಣೆಗಾಗಿ ವಾಯುಪ್ರದೇಶವನ್ನು ಭಾಗಶಃ ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

“ಕೆಳಗಿನ ವೇಳಾಪಟ್ಟಿಯ ಪ್ರಕಾರ BLR ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಕಾರ್ಯಾಚರಣೆಗಾಗಿ ವಾಯುಪ್ರದೇಶವನ್ನು ಸ್ಥಗಿತಗೊಳಿಸಲಾಗುತ್ತದೆ. ಪರಿಷ್ಕೃತ/ಬದಲಾದ ಫ್ಲೈಟ್ ವೇಳಾಪಟ್ಟಿಯ ಮಾಹಿತಿಗಾಗಿ ದಯವಿಟ್ಟು ಆಯಾ ಏರ್‌ಲೈನ್‌ನೊಂದಿಗೆ ಸಂಪರ್ಕ ಸಾಧಿಸಿ” ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BAIL) ವೇಳಾಪಟ್ಟಿಯನ್ನು ಹಂಚಿಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣ – ಫೆಬ್ರುವರಿ 8-17ರ ವರೆಗೆ ಹಾರಾಟದ ಸಮಯ :

  • ಫೆಬ್ರವರಿ 8 ರಂದು, ವಾಣಿಜ್ಯ ವಿಮಾನ ಕಾರ್ಯಾಚರಣೆಗಳನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಸ್ಥಗಿತಗೊಳಿಸಲಾಗುತ್ತದೆ.
  • ಇದೇ ರೀತಿಯ ನಿರ್ಬಂಧಗಳು ಫೆಬ್ರವರಿ 9-11ರ ವರೆಗೆ ಜಾರಿಯಲ್ಲಿರುತ್ತದೆ.
  • ಫೆಬ್ರವರಿ 12 ರಂದು, ಅಂತಿಮ ಪೂರ್ವಾಭ್ಯಾಸಕ್ಕಾಗಿ ರನ್‌ವೇಗಳನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮುಚ್ಚಲಾಗುತ್ತದೆ.
  • ಫೆಬ್ರವರಿ 13 ರಂದು, ಉದ್ಘಾಟನಾ ಸಮಾರಂಭ, ಫ್ಲೈ ಪಾಸ್ಟ್ ಮತ್ತು ಫ್ಲೈಯಿಂಗ್ ಡಿಸ್ಪ್ಲೇಗಾಗಿ ರನ್ವೇಗಳನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರ ನಡುವೆ ಮುಚ್ಚಲಾಗುತ್ತದೆ.
  • ಫ್ಲೈಯಿಂಗ್ ಡಿಸ್ಪ್ಲೇ ನೀಡಿರುವುದರಿಂದ ಫೆಬ್ರವರಿ 14 ಮತ್ತು 15 ರಂದು ಮಧ್ಯಾಹ್ನ 12 ರಿಂದ 2.30 ರವರೆಗೆ ವಾಯುಪ್ರದೇಶವನ್ನು ಮುಚ್ಚಲಾಗುತ್ತದೆ.
  • ಫೆಬ್ರವರಿ 16-17 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಹಾರುವ ಪ್ರದರ್ಶನಕ್ಕಾಗಿ ಕಾರ್ಯಾಚರಣೆಯನ್ನು ಮುಚ್ಚಲಾಗುತ್ತದೆ.

ಏರೋಸ್ಪೇಸ್ ಕಂಪನಿಗಳಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಏರೋ ಇಂಡಿಯಾ ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!