ಕರಾವಳಿ ಇನ್ನಷ್ಟು ಸುರಕ್ಷಿತ: ಕೋಸ್ಟ್ ಗಾರ್ಡ್‌ಗೆ ಅತ್ಯಾಧುನಿಕ ‘ಎಎಲ್‌ಎಚ್ ಸಿಜಿ 870’ ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ತಟ ರಕ್ಷಣ ಪಡೆಗೆ ಬೆಂಗಳೂರಿನ ಎಚ್‌ಎಎಲ್ ನಿರ್ಮಿತ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ಸಿಜಿ 870 ಸೇರ್ಪಡೆಗೊಂಡಿದೆ.
ಈ ಮೂಲಕ ತಟರಕ್ಷಣಗೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನಡೆದ ಸಮಾರಂಭದಲ್ಲಿ ಎಎಲ್‌ಎಚ್ ಸಿಜಿ 870 ಹೆಲಿಕಾಪ್ಟರನ್ನು ಕೋಸ್ಟ್ ಗಾರ್ಡ್ ಬರಮಾಡಿಕೊಂಡಿತು. ಈ ಹೆಲಿಕಾಪ್ಟರ್ ಶೀಘ್ರ ಚೆನ್ನೈಯಲ್ಲಿ ಸೇವೆಗೆ ಸೇರ್ಪಡೆಗೊಳ್ಳಲಿದೆ.

ತಟರಕ್ಷಣ ಪಡೆಯ ಜವಾಬ್ದಾರಿಗಳು ಹೆಚ್ಚಿರುವುದರಿಂದ ಅತ್ಯಾಧುನಿಕ ಸೌಲಭ್ಯಗಳ ಅಗತ್ಯ ಹೆಚ್ಚುತ್ತಿದ್ದು ಇದಕ್ಕೆ ಪೂರಕವಾಗಿ ನಾಲ್ಕು ಎಎಲ್‌ಎಚ್ ಎಂಕೆ -3 ಹೆಲಿಕಾಪ್ಟರ್‌ಗಳ ಸೇರ್ಪಡೆ ಮಿಷನ್ ಆರಂಭಿಸಲಾಗಿದೆ ಎಂದು ಭಾರತೀಯ ತಟರಕ್ಷಣ ಪಡೆ (ಪೂರ್ವ ವಿಭಾಗ) ಯ ಮಹಾನಿರ್ದೇಶಕ ವಿ.ಎಸ್. ಪಠಾನಿಯಾ ಹೇಳಿದ್ದಾರೆ.

ಈ ಹಿಂದೆ 2017ರಲ್ಲಿ ತಟರಕ್ಷಣಾ ಪಡೆ ಎಚ್‌ಎಎಲ್‌ನೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿತ್ತು. ಅದು ಈ ಮೂಲಕ ಮುಕ್ತಾಯಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!