ಕೇರಳ ಚಿನ್ನ ಕಳ್ಳಸಾಗಣೆ ಹಗರಣ | ದುಬೈಯಲ್ಲಿದ್ದಾಗ ಪಿಣರಾಯಿಗೆ ನೋಟಿನ ಬ್ಯಾಗ್ ಕಳುಹಿಸಲಾಗಿತ್ತು: ಸ್ವಪ್ನಾ ಬಾಂಬ್!

ಹೊಸದಿಗಂತ ದಿಜಿಟಲ್‌ ಡೆಸ್ಕ್‌

ಕೇರಳದ ಬೃಹತ್ ಚಿನ್ನ ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಈ ಸಂದರ್ಭ ಈ ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶಾಮೀಲಾಗಿದ್ದಾರೆ ಎಂಬ ಸೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಕೊಲ್ಲಿ ದೇಶದ ರಾಜತಾಂತ್ರಿಕ ಕಚೇರಿಗೆ ಬಂದಿದ್ದ ಬ್ಯಾಗೇಜ್‌ನಲ್ಲಿ ಬೃಹತ್ ಪ್ರಮಾಣದ ಚಿನ್ನ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇದು ಬಹಳ ವರ್ಷಗಳಿಂದ ನಡೆಯುತ್ತಿದ್ದ ಹಗರಣ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.2016ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದುಬೈಯಲ್ಲಿದ್ದ ಸಂದರ್ಭ , ಕರೆನ್ಸಿಗಳನ್ನು ಹೊಂದಿದ್ದ ಬ್ಯಾಗೊಂದನ್ನು ಅವರಿಗೆ ಕಳಉಹಿಸಲಾಗಿತ್ತು ಎಂಬುದಾಗಿ ಎರ್ನಾಕುಳಂನ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಒಂದರ ಮುಂದೆ ಸ್ವಪ್ನಾ ಸುರೇಶ್ ಹೇಳಿಕೆ ನೀಡಿದ್ದಾರೆ. ಈಕೆಯ ರಹಸ್ಯ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ಈ ಹಗರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಲದೆ, ಅವರ ಮಾಜಿ ಪ್ರಿನ್ಸಿಪಾಲ್ ಸೆಕ್ರೆಟರಿ ಎಂ.ಶಿವಶಂಕರ್ , ಪಿಣರಾಯಿ ಅವರ ಪತ್ನಿ ಕಮಲಾ, ಪುತ್ರಿ ವೀಣಾ, ಸಿಎಂ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್, ಮಾಜಿ ಅಕಾರಿ ನಳಿನಿ ನೆಟ್ಟೊ, ಮಾಜಿ ಸಚಿವ ಕೆ.ಟಿ.ಜಲೀಲ್ ಮತ್ತಿತರರು ಕೂಡಾ ಶಾಮೀಲಾಗಿರುವುದಾಗಿ ಸ್ವಪ್ನಾ ವಿವರಿಸಿದ್ದಾಗಿ ತಿಳಿದುಬಂದಿದೆ.
ಇದೆಲ್ಲ (ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ ಕಳ್ಳಸಾಗಣೆ ಪ್ರಕರಣ)2016ರಿಂದಲೇ ಅಂದರೆ ಸಿಎಂ ಪಿಣರಾಯಿ ವಿಜಯನ್ ಅವರು ದುಬೈ ಭೇಟಿ ನಡೆಸಿದಂದಿನಿಂದಲೇ ನಡೆಯುತ್ತಿದೆ. ಶಿವಶಂಕರ್ ಅವರು ಮೊದಲಿಗೆ ನನ್ನನ್ನು ಸಂಪರ್ಕಿಸಿದ್ದು, ನಾನು ಕಾನ್ಸುಲೇಟ್‌ನಲ್ಲಿ ಸೆಕ್ರೆಟರಿ ಆಗಿದ್ದಾಗ. ಮುಖ್ಯಮಂತ್ರಿಯವರ ಒಂದು ಬ್ಯಾಗ್ ಮರೆತುಬಿಟ್ಟಿದ್ದು, ಅದನ್ನು ತಕ್ಷಣವೇ ದುಬೈಗೆ ಕಳುಹಿಸಬೇಕು ಎಂಬುದಾಗಿ ಅವರು ಸೂಚನೆ ನೀಡಿದ್ದರು. ಅದರಂತೆ ನಾವು ಬ್ಯಾಗನ್ನು ಕಾನ್ಸುಲೇಟ್‌ಗೆ ಕಳುಹಿಸಿದ್ದೆವು. ಅದರಲ್ಲಿ ಕರೆನ್ಸಿ ಇದ್ದುದು ಸ್ಕ್ಯಾನಿಂಗ್ ವೇಳೆ ನಮ್ಮ ಗಮನಕ್ಕೆ ಬಂದಿತ್ತು. ಅಲ್ಲಿಂದ ಮುಂದೆ ಇದೆಲ್ಲ ಮುಂದುವರಿಯುತ್ತಾ ಬಂದಿದೆ ಎಂದರು . ಪರಿಸ್ಥಿತಿ ಮತ್ತು ಸಮಯ ಅನುಮತಿಸಿದಾಗ ನಾನು ಎಲ್ಲವನ್ನೂ ಬಹಿರಂಗಪಡಿಸುವೆ ಎಂದು ಆಕೆ ತಿಳಿಸಿದ್ದಾರೆ.
ತನ್ನ ಜೀವಕ್ಕೆ ಅಪಾಯ:ಸ್ವಪ್ನಾ
ತನ್ನ ಜೀವಕ್ಕೆ ಗಂಭೀರ ಬೆದರಿಕೆ ಇದ್ದು, ಆದ್ದರಿಂದ ನಾನು ನ್ಯಾಯಾಲಯದ ಮುಂದೆ ಹಗರಣಕ್ಕೆ ಸಂಬಂಸಿದ ಸತ್ಯಾಂಶಗಳನ್ನು ಬಿಚ್ಚಿಟ್ಟಿದ್ದೇನೆ ಎ ದು ಸ್ವಪ್ನಾ, ನ್ಯಾಯಾಲಯದ ವಿಚಾರಣೆ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೃಹತ್ ಚಿನ್ನ ಕಳ್ಳಸಾಗಣೆ ಹಗರಣ ಮತ್ತು ಅದರಲ್ಲಿ ಶಾಮೀಲಾದ ವ್ಯಕ್ತಿಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಅವರು ಹೇಳಿದರು .
2020 ರ ಜು.5ರಂದು ತಿರುವನಂತಪುರಂನಲ್ಲಿ ಯುಎಇ ಕಾನ್ಸುಲೇಟ್‌ಗೆ ಬಂದಿದ್ದ ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ 15 ಕೋ.ರೂ.ಗಳಿಗೂ ಅಕ ಮೊತ್ತದ ಚಿನ್ನವನ್ನು ವಶಪಡಿಸಿಕೊಳ್ಳುವ ಮೂಲಕ ಬೃಹತ್ ಚಿನ್ನ ಕಳ್ಳಸಾಗಣೆ ಹಗರಣವನ್ನು ಎನ್‌ಐಎ , ಜಾರಿ ನಿರ್ದೇಶನಾಲಯ ಮತ್ತು ಕಸ್ಟಮ್ಸ್ ಇಲಾಖೆಗಳು ಬಯಲಿಗೆಳೆದಿದ್ದವು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!