ಪ್ರಯಾಣಿಕರೇ ಗಮನಿಸಿ.. ಮೆಟ್ರೋ ರೈಲುಗಳಲ್ಲಿ ಸೈಕಲ್ ಕೊಂಡೊಯ್ಯಲು ಅವಕಾಶ: ಆದ್ರೆ ಈ ಷರತ್ತು ಅನ್ವಯ!

ಹೊಸದಿಗಂತ ದಿಜಿಟಲ್‌ ಡೆಸ್ಕ್‌

ರಾಜ್ಯ ರಾಜಧಾನಿಯ ಮೆಟ್ರೋ ರೈಲುಗಳಲ್ಲಿ ಸೈಕಲ್ ಕೊಂಡೊಯ್ಯಲು ಅವಕಾಶ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಅವಕಾಶ ನೀಡಿದೆ.
ಆದರೆ ಈ ಕುರಿತು ಕೆಲವು ಸೂಚನೆಗಳನ್ನು ನೀಡಿದ್ದು, ಇಲ್ಲಿ ಎಲ್ಲ ಬಗೆಯ ಸೈಕಲ್​ಗಳನ್ನು ರೈಲಿನಲ್ಲಿ ಸಾಗಿಸಲು ಸಮ್ಮತಿಸಿಲ್ಲ. ಕೇವಲ ಮಡಚಬಹುದಾದ ಸೈಕಲ್​ಗಳನ್ನು ಮಾತ್ರ ಕೊಂಡೊಯ್ಯಬಹುದಾಗಿದೆ.
ಗರಿಷ್ಠ 15 ಕೆಜಿ ತೂಕ ಇರುವ ಸೈಕಲ್​ಗಳನ್ನು ರೈಲುಗಳಲ್ಲಿ ಸಾಗಿಸಬಹುದಾಗಿದೆ. ರೈಲಿನಲ್ಲಿ ಸಾಗಿಸಲು ತರುವ ಸೈಕಲ್​ಗಳನ್ನು ಪ್ರವೇಶ ದ್ವಾರದಲ್ಲಿಯೇ ಸಿಬ್ಬಂದಿ ಪರಿಶೀಲಿಸುತ್ತಾರೆ.ಈ ಇದಕ್ಕಾಗಿ ರೈಲಿನ ಕೊನೆಯ ಬೋಗಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇನ್ನು ಸೈಕಲ್‌ ಸಾಗಣೆಗೆ ಹೆಚ್ಚುವರಿ ಶುಲ್ಕ ತೆರಬೇಕಿಲ್ಲ. ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ ಇತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾದ ನಂತರ ಸೈಕಲ್ ಬಳಕೆಗೆ ಹೆಚ್ಚು ನೀಡಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಮನೆಗಳಿಂದ ಮೆಟ್ರೋ ನಿಲ್ದಾಣಗಳವರೆಗೆ ಸೈಕಲ್​ಗಳಲ್ಲಿ ಬರುವ ಜನರು ತಮ್ಮ ಸೈಕಲ್​ಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯಲು ಅವಕಾಶ ಇರಬೇಕು. ಹೀಗಿದ್ದಾಗ ಅವರು ಮೆಟ್ರೋ ನಿಲ್ದಾಣಗಳಿಂದ ಇಳಿದ ನಂತರ ಕಚೇರಿಗಳಿಗೆ ತೆರಳಲು ಅನುಕೂಲವಾಗುತ್ತದೆ. ಶಾಲೆಗಳಿಗೆ ಹೋಗುವ ಮಕ್ಕಳಿಗೂ ಇದರಿಂದ ಅನುಕೂಲವಾಗುತ್ತದೆ ಎಂದು ಸಾಕಷ್ಟು ಜನರು ಒತ್ತಾಯಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!