ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಪ್ರಕರಣವೊಂದರ ವಿಚಾರಣೆ ನಡೆದಿದೆ. ಕೇರಳ ಹೈಕೋರ್ಟ್ ರಾತ್ರಿ ವೇಳೆ ವಿಚಾರಣೆ ನಡೆಸಿ ಇತಿಹಾಸ ಸೃಷ್ಟಿಸಿದೆ.
ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗು, ನಿಗದಿತ ಶುಲ್ಕ ಕಟ್ಟಲು ನಿರಾಕರಿಸಿತ್ತು, ರಾತ್ರಿ 11:30ಕ್ಕೆ ಜಸ್ಟಿಸ್ ದೇವನ್ ರಾಮಚಂದ್ರನ್ ಅವರು ವಿಡಿಯೋ ಮುಖೇನ ವಿಚಾರಣೆ ನಡೆಸಿದ್ದಾರೆ.
ಮೊತ್ತ ನೀಡಲು ನಿರಾಕರಿಸಿದರೆ, ಹಣ ಸಂದಾಯವಾಗದಿದ್ದಲ್ಲಿ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಒಟ್ಟು 2.44 ಕೋಟ.ರೂ ಹಣ ಮೊತ್ತ ಬಾಕಿ ಇದೆ. ಇದರ ಜೊತೆಗೆ 25,000 ರೂ. ಬಡ್ಡಿ ಪಾವತಿಗೆ ನ್ಯಾಯಾಲಯ ಆದೇಶಿಸಿದೆ.