ಐಎಸ್‌ ಉಗ್ರ ಸಂಘಟನೆಗೆ ಯುವಕರ ನೇಮಕಾತಿ: ಉಗ್ರ ಶೈಬು ನಿಹಾರ್ ಗೆ 5 ವರ್ಷ ಕಠಿಣ ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
ಇಸ್ಲಾಮಿಕ್ ಸ್ಟೇಟ್ (ಐಎಸ್) ಗೆ ಯುವಕರನ್ನು ನೇಮಕಾತಿ ಮಾಡುತ್ತಿದ್ದ ಪ್ರಕರಣದಲ್ಲಿ ಕೇರಳದ ಕೋಝಿಕೋಡ್‌ನ ಕೊಡುವಳ್ಳಿ ಮೂಲದ ಉಗ್ರ ಶೈಬು ನಿಹಾರ್ ದೋಷಿ ಎಂದು ಕೊಚ್ಚಿಯ ವಿಶೇಷ ಎನ್‌ಐಎ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿಯು ಅಪರಾಧಿಯೆಂದು ಸಾಬೀತಾಗಿದೆ. ಮತ್ತು ಐಪಿಸಿ ಸೆಕ್ಷನ್ 125 ರ ಅಡಿಯಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ದಂಡವನ್ನು ಪಾವತಿಸಲು ನ್ಯಾಯಾಲಯವು ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತನ್ನು ದೋಷಿ ಎಂದು ಘೋಷಿಸಲಾಗಿದೆ. ವಂದೂರು ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಶೈಬು ನಿಹಾರ್ ಮೇಲೆ ಪ್ರಕರಣ ದಾಖಲಾಗಿತ್ತು. 2015 ಮತ್ತು 2017 ರಲ್ಲಿ ಸುಮಾರು ಏಳು ಜನರು ಐಎಸ್ ಪ್ರದೇಶಕ್ಕೆ ಪ್ರಯಾಣಿಸಿರುವುದು ಬಹಿರಂಗವಾದ ನಂತರ ಐಎಸ್‌ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ.
2018ರಿಂದ NIA ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಪ್ರಕರಣದ ಇತರ ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!