Tuesday, September 27, 2022

Latest Posts

ಬಾಲಕರ ಹಿಂದೆ ಬಿದ್ದ ಬೀದಿನಾಯಿಗಳು: ಅಪಾಯದಿಂದ ಪಾರಾದ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಹುಚ್ಚಾಟಕ್ಕೆ ಅನೇಕ ಪ್ರಾಣಗಳು ಬಲಿಯಾಗಿದ್ದು, ಕೆಲವರು ಆಸ್ಪತ್ರೆ ಪಾಲಾಗಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ನಾಲ್ಕೈದು ಬೀದಿನಾಯಿಗಳು ಬಾಲಕರ ಹಿಂದೆ ಬಿದ್ದಿವೆ. ಅದೃಷ್ಟವಶಾತ್‌ ಇಬ್ಬರು ಬಾಲಕರು ಓಡೋಡಿ ಬಂದು ಮನೆ ತಲುಪಿದ್ದಾರೆ. ರಾತ್ರಿ ವೇಳೆ ಕೂಡ ಓರ್ವ ಮಹಿಳೆಯನ್ನು ನಾಯಿಗಳು ಬೆನ್ನಟ್ಟಿವೆ. ಈ ಘಟನೆ ಕಣ್ಣೂರಿನಲ್ಲಿ ನಡೆದಿದ್ದು, ಬೀದಿ ನಾಯಿಗಳ ಕಾಟಕ್ಕೆ ಅಲ್ಲಿನ ಜನ ರೋಸಿ ಹೋಗಿದ್ದಾರೆ.

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಅರ್ಜಿ ವಿಚಾರಣೆ ನಡೆಯಿತು. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಜೆ.ಕೆ. ಮಹೇಶ್ವರಿಅವರನ್ನೊಳಗೊಂಡ ಪೀಠವು ಬೀದಿನಾಯಿಗಳಿಗೆ ಅನ್ನ ಹಾಕುವವರದ್ದೇ ಸಂಪೂರ್ಣ ಜವಾಬ್ದಾರಿ ಎಂಬ ತೀರ್ಪು ಕೂಡಾ ನೀಡಿತ್ತು. ಸರ್ಕಾರ ಕೂಡಾ ನ್ಯಾಯಾಲಯದ ಆದೇಶವನ್ನು ಒಪ್ಪಿ ಸ್ಥಳೀಯ ಇಲಾಖೆಗಳ ಮೂಲಕ ನಾಯಿಗಳ ಹಾವಳಿ ತಪ್ಪಿಸುವುದಾಗಿ ಹೇಳಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!