Monday, September 26, 2022

Latest Posts

ವಿಜಯ್ ಎದುರು ವಿಲನ್‌ ಆಗಿ ಅಬ್ಬರಿಸಲು ಸಂಜಯ್ ದತ್‌ಗೆ 10 ಕೋಟಿ? ಖಳನಾಯಕ್ ದತ್‌ ಗೆ ಸೌತ್‌ನಲ್ಲಿ ಭರ್ಜರಿ ಡಿಮ್ಯಾಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಚಂಡ ಗೆಲುವು ಕಂಡ ಕೆಜಿಎಫ್‌-2 ಚಿತ್ರದಿಂದಾಗಿ ಬಾಲಿವುಡ್‌ ನಟ ಸಂಜಯ್‌ ದತ್ ಕೆರಿಯರ್‌ ಗ್ರಾಫ್‌ ಏರುಮುಖವಾಗಿ ಸಾಗುತ್ತಿದೆ. ಈ ಚಿತ್ರದಿಂದಾಗಿ ಬಾಲಿವುಡ್‌ ಮಾತ್ರವಲ್ಲ ದಕ್ಷಿಣದ ಚಿತ್ರರಂಗದಲ್ಲೂ ದತ್‌ ಗೆ ಅಪಾರ ಬೇಡಿಕೆ ಸೃಷ್ಠಿಯಾಗಿದೆ. ಸಂಜಯ್ ದತ್ ಪ್ರಸ್ತುತ ಬ್ಯಾಕ್-ಟು-ಬ್ಯಾಕ್ ಚಿತ್ರಗಳಲ್ಲಿ ವಿಲನ್‌ ಆಗಿ ಅಬ್ಬರಿಸುತ್ತಿದ್ದಾರೆ.
ಇತ್ತೀಚಿನ ವರದಿಯ ಪ್ರಕಾರ, ʼವಿಕ್ರಮ್‌ʼ ಚಿತ್ರದ ಮೂಲಕ ಭರ್ಜರಿ ಯಶಸ್ಸು ಸಾಧಿಸಿರುವ ತಮಿಳಿನ ಸ್ಟಾರ್‌ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ ಮುಂದಿನ ಚಿತ್ರದಲ್ಲಿ ದಳಪತಿ ವಿಜಯ್ ಎದುರು ವಿಲನ್‌ ಆಗಿ ಅಬ್ಬರಿಸಲು ಸಂಜಯ್ ದತ್‌ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ವಿಜಯ್ ದರೋಡೆಕೋರನ ಪಾತ್ರದಲ್ಲಿ ಕಾಣಿಸಿಕೊಂಡರೆ, ದತ್ ಪ್ರತಿಸ್ಪರ್ಧಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಭಾಗವಾಗಲು ನಟನಿಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಚಿತ್ರ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಒಂದುವೇಳೆ ಇಷ್ಟು ಸಂಭಾವನೆ ಪಡೆಯುತ್ತಿರುವುದು ನಿಜವಾದರೆ ದತ್‌ ಸೌತ್‌ ನ ದುಬಾರಿ ಖಳನಾಯಕನಾಗಲಿದ್ದಾರೆ.
ಈ ಚಿತ್ರವು ಹಿಂದಿ ಮಾರುಕಟ್ಟೆಯಯನ್ನು ಗಮನದಲ್ಲಿಸಿಕೊಂಡಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಮಳೆಯಾಳಂ ನಟ ಪೃಥ್ವಿರಾಜ್ ಸಹ ನೆಗೆಟಿವ್ ರೋಲ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!