ಟಾಲಿವುಡ್‌ ಸೂಪರ್‌ ಸ್ಟಾರ್ ಬಾಲಯ್ಯ ಎದುರು ಖಳನಾಗಿ ಗರ್ಜಿಸಲಿದ್ದಾರೆ ಕೆಜಿಎಫ್ ಖ್ಯಾತಿಯ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಖಂಡ ಚಿತ್ರದ ಪ್ರಚಂಡ ಯಶಸ್ಸಿನೊಂದಿಗೆ ಟಾಲಿವುಡ್‌ ಸೂಪರ್‌ ಸ್ಟಾರ್‌ ನಂದಮುರಿ ಬಾಲಕೃಷ್ಣ ಸಖತ್ ಫಾರ್ಮ್‌ನಲ್ಲಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ ಬಾಲಯ್ಯ ಮುಂದಿನ ಚಿತ್ರ ʼವೀರ ಸಿಂಹ ರೆಡ್ಡಿʼ ಘೋಷಣೆಯಾಗಿದ್ದು, ಕನ್ನಡ ಇಂಡಸ್ಟ್ರಿಯ ಖ್ಯಾತ ನಟರು ಚಿತ್ರದಲ್ಲಿ ಬಾಲಯ್ಯಗೆ ಮುಖಾಮುಖಿಯಾಗುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಿರುವ ಬೆನ್ನಲ್ಲೇ, ಇದೀಗ `ಕೆಜಿಎಫ್′ ಖ್ಯಾತಿಯ ನಟ ಸಹ ಚಿತ್ರತಂಡ ಸೇರಿದ್ದಾರೆ.
ಕೆಜಿಎಫ್ ಫ್ರಾಂಚೈಸ್‌ನಲ್ಲಿ ಆಂಡ್ರ್ಯೂಸ್ ಪಾತ್ರವನ್ನು ನಿರ್ವಹಿಸಿದ್ದ ಕನ್ನಡ ನಟ ಅವಿನಾಶ್ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಶಕ್ತಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಚಿತ್ರದಲ್ಲಿ ಗಂಗಿ ರೆಡ್ಡಿ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರ ಪಾತ್ರವನ್ನು ಪ್ರೇಕ್ಷಕರಿಗೆ ರೋಮಾಂಚನವಾಗುವಂತೆ ಅದ್ಭುತವಾಗಿ ರೂಪಿಸಲಾಗಿದೆ. ಸದ್ಯ ಅವರ ಭಾಗಗಳ ಚಿತ್ರೀಕರಣ ನಡೆಯುತ್ತಿದೆ ಎಂದು ಚಿತ್ರತಂಡದ ಮೂಲಗಳು ಹೇಳಿವೆ.
ವೀರ ಸಿಂಹ ರೆಡ್ಡಿ 2023 ರ ಸಂಕ್ರಾಂತಿಯಂದು ತೆರೆಗೆ ಅಪ್ಪಳಿಸಲಿದೆ. ಬಾಲಯ್ಯಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ದುನಿಯಾ ವಿಜಯ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ತಮನ್ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!