Wednesday, June 7, 2023

Latest Posts

ಖಾಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್​ ಆಪ್ತ ಪಪಲ್​ಪ್ರೀತ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಖಾಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್ ಸಿಂಗ್​ನ ಆಪ್ತ ಪಪಲ್​ಪ್ರೀತ್ ಸಿಂಗ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ವಾರ ಹೋಶಿಯಾರ್‌ಪುರದ ಹಳ್ಳಿಯೊಂದರಲ್ಲಿ ಪಾಪಲ್‌ಪ್ರೀತ್‌ನನ್ನು ಡೇರಾದಲ್ಲಿ ಕಾಣಿಸಿಕೊಂಡಿದ್ದ ಎಂದು ಹೇಳಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು.ಇದೀಗ ಪಪಲ್​ಪ್ರೀತ್​ ಸಿಂಗ್​ನ ಬಂಧನವಾಗಿದ್ದು, ಇದರಿಂದ ಅಮೃತ್​ಪಾಲ್​ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆಯೇ ಎಂದು ಕಾದು ನೋಡಬೇಕಿದೆ.

ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​(Amritpal Singh) ನನ್ನು ಹಿಡಿಯಲು ಕಳೆದ ಮೂರು ವಾರಗಳಿಂದ ಪ್ರಯತ್ನಿಸುತ್ತಿದ್ದು, ನಿರಂತರವಾಗಿ ಪೊಲೀಸರಿಂದ ನುಣುಚಿಕೊಳ್ಳುತ್ತಿದ್ದಾನೆ.

ಅಮೃತ್‌ಪಾಲ್‌ರನ್ನು ಪರಾರಿಯಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸರು ಘೋಷಣೆ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿರುವ ಆಪಾದನೆ ಕೂಡ ಈತನ ಮೇಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಗತಿಯೇ ಶಾ ಅವರಿಗೆ ಬರಲಿದೆ ಎಂದು ಸಿಂಗ್ ಧಮ್ಕಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಅಮೃತ್‌ಪಾಲ್ ಸಹಾಯಕರಾದ ದಲ್ಜೀತ್ ಸಿಂಗ್ ಕಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು ಪ್ರಧಾನ್‌ಮಂತ್ರಿ ಬಜೇಕಾ ಈ ನಾಲ್ವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ.

ಅಮೃತ್​ಪಾಲ್​ನ 114 ಸಹಚರರು ಪೊಲೀಸರ ವಶದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!