ಏಷ್ಯಾದ ಅತಿ ಉದ್ದದ ಸುರಂಗ ಮಾರ್ಗ ಕಾಮಗಾರಿ ಪರಿಶೀಲಿಸಿದ ನಿತಿನ್ ಗಡ್ಕರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕಾಶ್ಮೀರದ ಸೋನ್ಮಾರ್ಗ್‌ನಲ್ಲಿ ಲಡಾಖ್‌ಗೆ ಸಂಪರ್ಕವನ್ನು ಒದಗಿಸುವ ಏಷ್ಯಾದ ಅತಿ ಉದ್ದದ ಜೊಜಿಲಾ ಸುರಂಗದ ನಡೆಯುತ್ತಿರುವ ಕಾಮಗಾರಿಯನ್ನು ಇಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪರಿಶೀಲಿಸಿದರು.

900 ಕೋಟಿ ರೂ. ವೆಚ್ಚದ 13 ಕಿಲೋಮೀಟರ್ ಉದ್ದದ ಜಿಜಿಲಾ ಸುರಂಗದ ನಿರ್ಮಾಣ 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಇಂದು ಗಡ್ಕರಿ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ನಿರ್ಮಾಣ ಹಂತದಲ್ಲಿರುವ ಸುರಂಗಕ್ಕೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ಈ ಸುರಂಗದ ನಿರ್ಮಾಣದಿಂದ ಪ್ರವಾಸೋದ್ಯಮದಲ್ಲಿ 2-3 ಪಟ್ಟು ಹೆಚ್ಚಾಗುತ್ತದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯೋಗಾವಕಾಶಗಳು ಸಹ ಬೆಳೆಯುತ್ತವೆ . ನಾವು ಕಾಶ್ಮೀರದಿಂದ ಕನ್ಯಾಕುಮಾರಿ ನಡುವಿನ ಸಂಪರ್ಕವನ್ನು ಕೂಡ ಸಾಧಿಸುತ್ತೇವೆ ಎಂದಿದ್ದಾರೆ.

ಝೋಜಿಲಾ ಪಾಸ್ ದಾಟಲು ಸರಾಸರಿ ಪ್ರಯಾಣದ ಸಮಯ ಸುಮಾರು ಮೂರು ಗಂಟೆಗಳು, ಇದೀಗ ಈ ಸುರಂಗ ಪೂರ್ಣಗೊಂಡ ನಂತರ ಅದು ಕೇವಲ 20 ನಿಮಿಷಗಳಿಗೆ ಇಳಿಯುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 25,000 ಕೋಟಿ ರೂ. ವೆಚ್ಚದಲ್ಲಿ ಕನಿಷ್ಠ 19 ಸುರಂಗಗಳನ್ನು ನಿರ್ಮಿಸಲಾಗುತ್ತಿದೆ , ಮುಖ್ಯವಾಗಿ ನಶ್ರಿ ಮತ್ತು ಬನಿಹಾಲ್ ವಿಭಾಗದ ನಡುವೆ ಭೂಕುಸಿತಕ್ಕೆ ಒಳಗಾಗುವ ಕಾರಣ ಈ ರಸ್ತೆ ಆಗಾಗ್ಗೆ ಮುಚ್ಚಲ್ಪಡುತ್ತದೆ ಎಂದು ಹೇಳಲಾಗಿದೆ.

 

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!