Saturday, June 10, 2023

Latest Posts

ಕಿಚ್ಚ ಸುದೀಪ್ ಹೊಸ ಅಪ್ ಡೇಟ್: ತಮಿಳು ನಿರ್ಮಾಪಕರ ಜೊತೆ ಮೂಡಿಬರುತ್ತೆ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಕ್ರಾಂತ್​ ರೋಣ’ ಬಳಿಕ ದೀರ್ಘ ಗ್ಯಾಪ್​ ನಲ್ಲಿದ್ದ ಕಿಚ್ಚ ಸುದೀಪ್ (Kichcha Sudeep)​ ಅ ಇದೀಗ ಹೊಸ ಸಿನಿಮಾದತ್ತ ಮುಖಮಾಡಿದ್ದಾರೆ.

ಸುದೀಪ್​ ಅವರ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಇಂದು (ಮೇ 24) ಹೊಸ ಮಾಹಿತಿ ಬಿಟ್ಟುಕೊಡಲಾಗಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಕೈ ಜೋಡಿಸಿದ್ದಾರೆ.

‘ವಿ ಕ್ರಿಯೇಷನ್ಸ್​’ ಮೂಲಕ ಅವರ ಹೊಸ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರಕ್ಕೆ ಕಲೈಪುಲಿ ಎಸ್​. ಧಾನು (Kalaipuli S Thanu) ಅವರು ಬಂಡವಾಳ ಹೂಡಲಿದ್ದಾರೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ‘ವಿ ಕ್ರಿಯೇಷನ್ಸ್​’ ಸಂಸ್ಥೆಗೆ ಇದೆ. ಈ ಬ್ಯಾನರ್​ ಜೊತೆ ಸುದೀಪ್​ ಅವರು ಸಿನಿಮಾ ಮಾಡಲಿರುವುದು ವಿಶೇಷ.

ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿದ್ದಾರೆ.

ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಕೈಯಲ್ಲಿರುವ ಮೂರು ಸಿನಿಮಾಗಳಲ್ಲಿ ಮೊದಲ ಶುರುವಾಗುವ ಚಿತ್ರದ ಬಗ್ಗೆ ಅವರು ಆಪ್ತರು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
https://twitter.com/Kichchacreatiin/status/1661331665548111872?ref_src=twsrc%5Etfw%7Ctwcamp%5Etweetembed%7Ctwterm%5E1661329880431362048%7Ctwgr%5E61500cdf5412440a7bf086f1210b4dd148196dd9%7Ctwcon%5Es1_&ref_url=https%3A%2F%2Ftv9kannada.com%2Fentertainment%2Fsandalwood%2Fkichcha-sudeep-to-do-new-movie-with-kalaipuli-s-thanu-fans-get-update-about-sudeep-next-movie-kiccha-46-mdn-586050.html

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!